ಕ್ರೀಡೆ

ಶೀಘ್ರದಲ್ಲೇ ಟಿ-20 ಕ್ರಿಕೆಟ್​ಗೆ ಕೊಹ್ಲಿ ನಿವೃತ್ತಿಗೆ ಮೂರು ಕಾರಣಗಳು

Pinterest LinkedIn Tumblr


ಬೆಂಗಳೂರು (ಜು. 26): ಇತ್ತೇಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್​ನ ಸೆಮಿ ಫೈನಲ್​ನಲ್ಲಿ ಮುಗ್ಗರಿಸಿದ ಭಾರತ ಸಾಕಷ್ಟು ಟೀಕೆಗೆ ಗುರಿಯಾಗ ಬೇಕಾಯಿತು. ಸರಿಯಾದ ಸ್ಥಾನದಲ್ಲಿ ಆಟಗಾರರನ್ನು ಆಡಿಸದೆ ಇದ್ದಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಕೊಹ್ಲಿ ನಾಯಕತ್ವದ ಬಗ್ಗೆಯೂ ಪ್ರಶ್ನೆ ಮಾಡಿದರು. ಇದು ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಮೇಲು ದೊಡ್ಡ ಹೊಡೆತ ಬಿದ್ದಂತಾಗಿತ್ತು.

ಇದರ ಮಧ್ಯೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಸ್ಥಾನಕ್ಕೆ ಸೂಕ್ತ ಅಲ್ಲ ರೋಹಿತ್ ಶರ್ಮಾಗೆ ನಾಯಕತ್ವ ನೀಡಿ ಎಂಬ ಕೂಗು ಕೇಳಿ ಬಂದಿದ್ದವು. ಆದರೆ, ಸದ್ಯ ನಾಯಕ ವಿರಾಟ್ ಟಿ-20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ.

1. ನಾಯಕನಾಗಿ ಒತ್ತಡ: ವಿರಾಟ್ ಕೊಹ್ಲಿಯನ್ನು ಫಿಟ್​ ನೆಸ್​​ನಲ್ಲಿ ಯಾರು ಮೀರಿಸುವರಿಲ್ಲ. ಆದರೆ, ಕೊಹ್ಲಿಗೆ ಈಗ 30 ವರ್ಷವಾಗಿದ್ದು ಇಂಜುರಿ-ಫಿಟ್ ನೆಸ್​ ಸಮಸ್ಯೆ ಇದುರಾಗಲಿದೆ. ಈ ವಯಸ್ಸಿನಲ್ಲಿ ಅನೇಕ ಕ್ರಿಕೆಟಿಗರು ಇಂತಹ ತೊಂದರೆಯನ್ನು ಅನುಭವಿಸಿದ್ದಾರೆ. ಈಗಾಗಲೇ ಸತತ ಕ್ರಿಕೆಟ್ ಆಡುತ್ತಿರುವ ಕೊಹ್ಲಿಗೆ ಮ್ಯಾನೇಜ್​ಮೆಂಟ್​​ ವಿಶ್ರಾಂತಿ ನೀಡುವತ್ತ ಗಮನ ಹರಿಸುತ್ತಿದೆ. ಮೂರು ಮಾಧರಿಯ ಕ್ರಿಕೆಟ್​ಗೆ ನಾಯಕನಾಗಿ ಕೆಲಸ ಮಾಡುವುದು ಸುಲಭದ ವಿಚಾರವಲ್ಲ. ಹೀಗಾಗಿ ಸದ್ಯದಲ್ಲೇ ಕೊಹ್ಲಿ ಟಿ-20 ಕ್ರಿಕೆಟ್​ಗೆ ವಿದಾಯ ಹೇಳುವ ಅಂದಾಜಿದೆ.

2. ಟಿ-20 ಯಲ್ಲಿ ಒಲಿಯದ ಲಕ್: ಟಿ-20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಗೆ ಲಕ್ ಇಲ್ಲ ಎಂದೇ ಹೇಳಬಹುದು. ಇದಕ್ಕೆ ಅನೇಕ ಸಾಕ್ಷಿಗಳಿವೆ. ಐಪಿಎಲ್​​ನಲ್ಲಿ ಈವರೆಗೆ ಕೊಹ್ಲಿ ಕಪ್ ಗೆದ್ದಿಲ್ಲ. ಅಲ್ಲದೆ ಅಂತರಾಷ್ಟ್ರೀಯ ಟಿ-20 ಯಲ್ಲು ಕೊಹ್ಲಿಯದ್ದು ದೊಡ್ಡ ಸಾಧನೆ ಏನಿಲ್ಲ. ಆದರೆ ಸದ್ಯ ಟೀಂ ಇಂಡಿಯಾದ ಉಪ ನಾಯಕನಾಗಿರುವ ರೋಹಿತ್ ಶರ್ಮಾ 4 ಬಾರಿ ಐಪಿಎಲ್ ಗೆದ್ದರೆ, ಭಾರತ ಪರವೂ ನಾಯಕನಾಗಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಹೀಗಾಗಿ ರೋಹಿತ್​ಗೆ ನಾಯಕನ ಪಟ್ಟ ಸಿಕ್ಕರು ಅಚ್ಚರಿಯಿಲ್ಲ.

3. ಟೆಸ್ಟ್​-ಏಕದಿನ ಕಡೆ ಹೆಚ್ಚಿನ ಗಮನ: ಭಾರತಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲು ಎದುರಾಗಲಿದೆ. ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅನ್ನು ಆಡಲಿದೆ. ಇದರ ಮೇಲೆ ಕೊಹ್ಲಿ ಹೆಚ್ಚಿನ ಗಮನ ಹರಿಸಬೇಕಿದೆ. 2017 ರಿಂದ ಭಾರತ ಈವರೆಗೆ 12 ಟಿ-20 ಸರಣಿಯನ್ನು ಆಡಿದ್ದು, ಇದರಲ್ಲಿ ಕೊಹ್ಲಿ 4 ಸರಣಿಯಿಂದ ಹಿಂದೆ ಸರಿದಿದ್ದರು. ಆದರೆ, ಒಂದೇ ಒಂದು ಟೆಸ್ಟ್​ ಪಂದ್ಯವನ್ನು ಮಿಸ್ ಮಾಡಲಿಲ್ಲ. ಹೀಗಾಗಿ ಕೊಹ್ಲಿ ಟೆಸ್ಟ್​ ಹಾಗೂ ಏಕದಿನ ಕಡೆ ಹೆಚ್ಚಿನ ಗಮನ ಕೊಡುವ ಅಂದಾಜಿದ್ದು, ಟಿ-20 ಫಾರ್ಮೆಟ್​ಗೆ ಸದ್ಯದಲ್ಲೆ ನಿವೃತ್ತಿ ನೀಡುವ ಮನಸ್ಸು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.