ಕ್ರೀಡೆ

ಈ ಇಬ್ಬರು ಕ್ರಿಕೆಟಿಗರ ನಂತರ ಸಚಿನ್‌ ತೆಂಡೂಲ್ಕರ್​​ಗೆ ಒಲಿದ ಈ ಗೌರವ!

Pinterest LinkedIn Tumblr


ನವದೆಹಲಿ: ಕ್ರಿಕೆಟ್​ ಜಗತ್ತಿನಲ್ಲಿ ಅತೀ ಹೆಚ್ಚು ರನ್‌ಗಳ ಸರದಾರ ಎಂಬ ಹೆಸರಿಗೆ ಪಾತ್ರವಾಗಿರುವ ಮಾಸ್ಟರ್‌ ಬ್ಲಾಸ್ಟರ್​, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರಿಗೆ ಜುಲೈ 19ರಂದು ಐಸಿಸಿ ಹಾಲ್‌ ಆಫ್‌ ಫೇಮ್‌ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದೆ.

ವಿಶ್ವದ ಸಾಕಷ್ಟು ಯುವಪೀಳಿಗೆಗಳಿಗೆ ಸ್ಫೂರ್ತಿಯಾಗಿರುವ, ಕ್ರಿಕೆಟ್‌ ದೇವರಾಗಿರುವ ಸಚಿನ್‌ಗೆ ಈ ಗೌರವ ಸಿಗಲು ಕೊಂಚ ವಿಳಂಬವಾಗಿದ್ದು ಸುಳ್ಳಾಲ್ಲ.

ಇನ್ನು ಹಾಲ್‌ ಆಫ್‌ ಫೇಮ್‌ ಗೌರವ ಪಡೆದಿರುವ ಭಾರತೀಯ ಕ್ರಿಕೆಟಿಗರ ಸಾಲಿನಲ್ಲಿ ಕ್ರಿಕೆಟ್​ ದೇವರು ಆರನೆಯವರು. 2015ರಲ್ಲಿ ಕನ್ನಡಿಗ ಅನಿಲ್‌ ಕುಂಬ್ಳೆ ಹಾಗೂ 2018ರಲ್ಲಿ ಕನ್ನಡಿಗ ರಾಹುಲ್‌ ದ್ರಾವಿಡ್‌ ಈ ಗೌರವಕ್ಕೆ ಪಾತ್ರರಾಗಿದ್ದರು. 34,357 ರನ್‌, 100 ಅಂತರರಾಷ್ಟ್ರೀಯ ಶತಕ ದಾಖಲೆ ಹೊಂದಿದ್ದಾರೆ.

ಅಲ್ಲದೇ ಐಸಿಸಿ ಹಾಲ್‌ ಆಫ್‌ ಫೇಮ್‌ ಸಾಲಿಗೆ ಆಯ್ಕೆಯಾಗುವ ಕ್ರಿಕೆಟಿಗ ವೃತ್ತಿ ಬದುಕಿಗೆ ನಿವೃತ್ತಿ ಪಡೆದು ಕನಿಷ್ಠ 5 ವರ್ಷ ಕಳೆದಿರಬೇಕು. ಉತ್ತಮ ಸಾಧನೆಗಳ ದಾಖಲೆ ಹೊಂದಿರುವ ದ್ರಾವಿಡ್‌ 2012ರಲ್ಲಿ ನಿವೃತ್ತಿ ಪಡೆದಿದ್ದರೆ, ಸಚಿನ್‌ ನಿವೃತ್ತರಾಗಿದ್ದು 2013ರಲ್ಲಿ. ಸಚಿನ್ ಅವರಿಗೂ ಮುನ್ನ ದ್ರಾವಿಡ್‌ ಕ್ರಿಕೆಟ್‌ ದಿಗ್ಗಜರ ಕ್ಲಬ್‌ಗೆ ಸೇರ್ಪಡೆಯಾಗಿದ್ದರು. ಅನಿಲ್ ಕುಂಬ್ಳೆ 2008ರಲ್ಲೇ ನಿವೃತ್ತಿ ಹೊಂದಿದ್ದರು.

ಭಾರತದ ಬಿಷನ್‌ ಸಿಂಗ್‌ ಬೇಡಿ (2009), 1983ರ ವಿಶ್ವಕಪ್​ ವಿಜೇತ ತಂಡದ ಭಾರತದ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ (2009), ಸುನಿಲ್‌ ಗವಾಸ್ಕರ್‌ (2009), ಕರ್ನಾಟಕದ ಅನಿಲ್‌ ಕುಂಬ್ಳೆ (2015) ಹಾಗೂ ರಾಹುಲ್‌ ದ್ರಾವಿಡ್‌ (2018) ಈ ಗೌರವಕ್ಕೆ ಪಡೆದುಕೊಂಡಿದ್ದರು.

Comments are closed.