ಕ್ರೀಡೆ

ವಿಶ್ವಕಪ್​​​​​​​: ಕ್ಯಾಚ್ ಬಿಟ್ಟಿರೋದರಲ್ಲಿ ಅರ್ಧದಷ್ಟು ಕ್ಯಾಚ್​ ಹಿಡಿದ್ದಿದರೆ ಟೂರ್ನಿಯಲ್ಲಿ ಈ ದೇಶ ಗೆಲ್ಲಬಹುದಿತ್ತು

Pinterest LinkedIn Tumblr

ಇಂಗ್ಲೆಂಡ್​​: ಕ್ಯಾಚ್​ ಹಿಡಿದರೆ ಸಾಕು ಪಂದ್ಯ ಗೆಲುವು ಖಚಿತ ಎಂಬ ಮಾತಿದೆ. ಈ ಸಾಲಿನ ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019ರಲ್ಲಿ ಕ್ಯಾಚ್ ಬಿಟ್ಟಿರೋದರಲ್ಲಿ ಅರ್ಧದಷ್ಟು ಕ್ಯಾಚ್​ ಹಿಡಿದ್ದಿದರೆ ಟೂರ್ನಿಯಲ್ಲಿ ಗೆಲ್ಲಬಹುದಿತ್ತು. ಅದು ಯಾವುದು ತಂಡ ಗೊತ್ತಾ ಭಾರತದ ಬದ್ಧವೈರಿ ಪಾಕಿಸ್ತಾನ ತಂಡ.

 

ಹೌದು, ಇಲ್ಲಿತನಕ ನಡೆದಿರುವ ಪಂದ್ಯಗಳಲ್ಲಿ ಅತೀ ಹೆಚ್ಚು ಕ್ಯಾಚ್​ ಡ್ರಾಪ್​ ಮಾಡಿರೋ ತಂಡ ಯಾವುದು ಎಂದರೆ ಸಾಕು ತಕ್ಷಣ ನೆನಪಿಗೆ ಬರೋ ತಂಡ ಯಾವುದು ಅಂದರೆ ಅದು ಪಾಕಿಸ್ತಾನವಾಗಿದೆ. ಇತ್ತೀಚಿಗೆ ನಡೆದ ದಕ್ಷಿಣ ಆಫ್ರಿಕಾ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲವು ಕಂಡಿದೆ. ಆದರೂ ಕೂಡ ಹಸಿರು ಜರ್ಸಿ ತೊಟ್ಟು ಮೈದಾನಕ್ಕೆ ಇಳಿಯುವ ಯುವಕರಲ್ಲಿ ಸಮಸ್ಯೆಗಳಿರುವುದು ಸತ್ಯ.

 

ಇನ್ನು ಪಾಕಿಸ್ತಾನ ತಂಡ ಸಮೀ ಫೈನಲ್​ ಪ್ರವೇಶ ಮಾಡುವ ಕನಸು ಜೀವಂತವಾಗಿಸಿಕೊಂಡಿದೆ. ಪಾಕಿಸ್ತಾನದ ಕಳಪೆ ಫಿಲ್ಡಿಂಗ್​ನಿಂದಾಗಿ​ ಕ್ಯಾಚ್ ಡ್ರಾಪ್​ ಮಾಡಿ ಪಂದ್ಯ ಸೋಲುವುದನ್ನು ತಳ್ಳಿಹಾಕುವಂತಿಲ್ಲ. ನಿಜ ಹೇಳಬೇಕು ಎಂದರೆ ದಕ್ಷಿಣ ಆಫ್ರಿಕಾ ತಂಡದ ಮ್ಯಾಚ್​ ನಡೆದ ಬಳಿಕ ಯಾರು ಅತೀ ಹೆಚ್ಚು ಕ್ಯಾಚ್​ ಡ್ರಾಪ್​ ಮಾಡಿದ್ದಾರೆ ಎಂದು ನೊಡಿದ್ರೆ ಪಾಕಿಸ್ತಾನ 35% ರಷ್ಟು ಕ್ಯಾಚ್​ ಡ್ರಾಪ್​​ ಮಾಡಿ ಮೊದಲ ಸ್ಥಾನದಲ್ಲಿ ನಿಲ್ಲುವುದು.

 

ಒಟ್ಟು 26 ಕ್ಯಾಚ್​ನಲ್ಲಿ 14 ಕ್ಯಾಚ್​​ಗಳನ್ನು ಕೈಚೆಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಪಾಕಿಸ್ತಾನ. ಬಳಿಕ ಇಂಗ್ಲೆಂಡ್​ 10 ಕ್ಯಾಚ್​ ಬಿಟ್ಟರೇ, ದಕ್ಷಿಣ ಆಫ್ರಿಕಾ 7 ಕ್ಯಾಚ್​, ನ್ಯೂಜಿಲೆಂಡ್​ ತಂಡ 6, ಭಾರತ ತಂಡ 15ರಲ್ಲಿ ಕೇವಲ ಒಂದು ಕ್ಯಾಚ್​ ಮಾತ್ರ ಕೈಚೆಲ್ಲಿದ್ದಾರೆ.

 

Comments are closed.