ಕ್ರೀಡೆ

ನಾನು ಹ್ಯಾಟ್ರಿಕ್​ ವಿಕೆಟ್​ ಪಡಿಯೋಕೆ ಧೋನಿ ಕಾರಣ – ಮೊಹಮ್ಮದ್​ ಶಮಿ

Pinterest LinkedIn Tumblr


ಇಂಗ್ಲೆಂಡ್​, ಸೌತಾಂಪ್ಟನ್: ಟೀಮ್ ಇಂಡಿಯಾ ವೇಗಿ ಮೊಹಮ್ಮದ್​ ಶಮೀ ಮತ್ತು ತಮ್ಮ ವಿಶಿಷ್ಟ ಬೌಲಿಂಗ್​ ಶೈಲಿಯಿಂದ ಗುರುತಿಸಿಕೊಂಡಿರುವ ಜಸ್ಪ್ರೀತ್​​ ಬುಮ್ರಾ ಇವರಿಬ್ಬರ ಅದ್ಭುತ ಆಟದಿಂದಾಗಿ ನಿನ್ನೆ ಭಾರತ ತಂಡ ಪಂದ್ಯ ಗೆದ್ದಿದೆ ಎಂದರೇ ತಪ್ಪಿಲ್ಲ.

ಮೊಹಮ್ಮದ್​ ಶಮೀ ಅವರು ನಿನ್ನೆ ನಡೆದ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ವಿಶ್ವಕಪ್​ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಚೇತನ್​ ಶರ್ಮಾ ಅವರು ಮೊದಲನೇಯವರಾಗಿದ್ದಾರೆ.

ಮೊಹಮ್ಮದ್​ ಶಮೀ ಅವರು ಈ ದಾಖಲೆ ಮಾಡಲು ಮಹೇಂದ್ರ ಸಿಂಗ್ ಧೋನಿ ಅವರ ಸಲಹೆಗಳೇ ಕಾರಣ ಎಂದು ಪಂದ್ಯ ಮುಗಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಮೊಹಮ್ಮದ್ ನಬೀ ಅವರು ಕ್ರೀಸ್​ನಲ್ಲಿ ಇದ್ದರು ಆಗ ನಾನು ಮಾಡಿದ ಬಾಲ್​​ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ನನಗೂ ಕೂಡ ಹೆಚ್ಚು ಒತ್ತಡವಿತ್ತು. ಆ ಸಮಯದಲ್ಲಿ ಧೋನಿ ಅವರು ಬಂದು ಹೇಳಿದ್ರು ‘ನೋಡು ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆಯುವುದು ಬಹಳ ಅಪರೂಪ ಹೀಗಾಗಿ ನಿನಗೆ ಆ ಒಂದು ಅವಕಾಶ ಸಿಕ್ಕಿದೆ ಇನ್ಮುಂದೆ ನೀನು ಯಾರ್ಕರ್​ ಬಾಲ್​ಗಳನ್ನು ಮಾಡಲು ಪ್ರಯತ್ನ ಮಾಡು’ ಎಂದರು ಎಂದು ಶಮೀ ಅವರ ಹೇಳಿಕೊಂಡಿದ್ದಾರೆ.

ಈ ಪಂದ್ಯವನ್ನು ಭಾರತ ತಂಡ 11 ರನ್​ಗಳಿಂದ ಜಯಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

Comments are closed.