
ಬೆಂಗಳೂರು: ವಿಶ್ವ ಕ್ರಿಕೆಟ್ನಲ್ಲಿ ಸದ್ಯ ಕ್ಲಾಸ್ ಹಾಗೂ ಮಾಸ್ ಎರಡೂ ಇರುವ ಆಟಗಾರರು ಇರುವುದು ಬೆರಳಣಿಕೆಯಷ್ಟು. ಹೀಗಿರುವಾಗ ಏಕದಿನ ಕ್ರಿಕೆಟ್ನಲ್ಲಿ ಮಿಂಚುಹರಿಸುತ್ತಿರುವ ಇಬ್ಬರು ಆಟಗಾರರು, ಟೀಂ ಇಂಡಿಯಾದಲ್ಲೇ ಇರುವುದು ಬಲು ವಿಶೇಷ. ಅವರೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ- ನಾಯಕ ರೋಹಿತ್ ಶರ್ಮಾ.
ವಿಶ್ವಕಪ್ನಲ್ಲಿ 10 ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುತ್ತಿದೆ. ಟೀಂ ಇಂಡಿಯಾ ಎದುರಾಳಿ ವಿರುದ್ಧ ಭರ್ಜರಿಯಾಗೇ ಆಟವಾಡುತ್ತಿದೆ. ಅದರ ಜೊತೆಗೆ ಟೀಂ ಇಂಡಿಯಾ ಒಳಗೂ ಭರ್ಜರಿಯಾಗೇ ಫೈಟ್ ನಡೆಯುತ್ತಿದೆ. ಅದೂ ಯಾವುದೇ ವೈಯಕ್ತಿಕ ವಿಚಾರಕ್ಕಲ್ಲ, ಬದಲಾಗಿ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ.
ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಸಿತು. ಮೊದಲ ಪಂದ್ಯದಲ್ಲೇ ಓಪನರ್ ರೋಹಿತ್ ಶರ್ಮಾ ಭರ್ಜರಿ ಸೆಂಚುರಿ ಸಿಡಿಸಿ ತಂಡ 300ರ ಗಡಿ ದಾಟುವಂತೆ ನೋಡಿಕೊಂಡರು.
ಇನ್ನು 2ನೇ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಉತ್ತಮವಾಗೇ ಬ್ಯಾಟ್ ಬೀಸಿದರು. ಆ ಪಂದ್ಯದಲ್ಲಿ ಶಿಖರ್ ಧವನ್ ಸೆಂಚುರಿ ಸಿಡಿಸಿದರೆ, ರೋಹಿತ್ 57 ರನ್ಗಳಿಸಿ ಔಟಾದರು. ಆದರೆ ರೋಹಿತ್-ಧವನ್ ಜೊತೆಯಾಟದಿಂದಲೇ ಭಾರತ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಭಾರತ ನಂತರ ಆಡಿದ್ದು ಪಾಕಿಸ್ತಾನ ವಿರುದ್ಧ. ನ್ಯೂಜಿಲೆಂಡ್ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ಪಾಕ್ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಇದಕ್ಕೆ ಮುಖ್ಯ ಕಾರಣ ಇದೇ ಹಿಟ್ಮ್ಯಾನ್. ಸಖತ್ ಸೆಂಚುರಿ ಸಿಡಿಸಿದ ರೋಹಿತ್, ಏಕದಿನ ಕ್ರಿಕೆಟ್ನಲ್ಲಿ 24ನೇ ಶತಕ ಸಿಡಿಸಿದರು. ಅಲ್ಲದೆ ಈ ಬಾರಿಯ ವಿಶ್ವಕಪ್ನಲ್ಲಿ 2ನೇ ಶತಕ ದಾಖಲಿಸಿದರು. ಈ ಮೂಲಕ ಭಾರತ ಪರ ಲೀಡಿಂಗ್ ರನ್ ಸ್ಕೋರರ್ ಆಗಿದ್ದಾರೆ ಡಬಲ್ ಸೆಂಚುರಿ ಸ್ಟಾರ್.
ಸದ್ಯ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ 50 ಪ್ಲಸ್ ರನ್ ಬಾರಿಸಿರುವ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಇದಕ್ಕೆ ಕಾರಣ ಆ ನಂಬರ್ 1 ಪ್ಲೇಸ್.
ಏಕದಿನ ಕ್ರಿಕೆಟ್ನಲ್ಲಿ ಸದ್ಯ ಆಳುತ್ತಿರುವ ಇಬ್ಬರು ಪ್ಲೇಯರ್ಗಳೆಂದರೆ ಅದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಏಕದಿನ ರ್ಯಾಂಕಿಂಗ್ನಲ್ಲಿ ನಂಬರ್ 1 ಹಾಗೂ ನಂಬರ್ 2 ಬ್ಯಾಟ್ಸ್ಮನ್ಗಳು ಈ ಇಬ್ಬರು ಆಟಗಾರರು. ಆದರೆ ಸದ್ಯ ಕೊಹ್ಲಿಗಿಂತಲೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಸದ್ಯ 890 ರೇಟಿಂಗ್ ಹೊಂದಿರುವ ವಿರಾಟ್ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ನಂತರದಲ್ಲೇ ರೋಹಿತ್ ಶರ್ಮಾ ಇದ್ದು, 839 ರೇಟಿಂಗ್ನೊಂದಿಗೆ 2 ಸ್ಥಾನ ಪಡೆದಿದ್ದಾರೆ.
ಹೀಗೆ ಟಾಪ್ 2 ಪ್ಲೇಯರ್ಗಳು ನಮ್ಮ ಟೀಂ ಇಂಡಿಯಾದಲ್ಲೇ ಇರುವುದು ವಿಶೇಷ. ಆದರೀಗ ವಿಶ್ವಕಪ್ನಲ್ಲಿ ಸತತ ಸೆಂಚುರಿ ಸಿಡಿಸುತ್ತಿರುವ ಹಿಟ್ಮ್ಯಾನ್ ಸದ್ಯದಲ್ಲೇ ವಿರಾಟ್ ಕೊಹ್ಲಿ ಸೆಡ್ಡೊಡೆಯೋಕೆ ಸಜ್ಜಾಗಿದ್ದಾರೆ. ವಿಶ್ವಕಪ್ನಲ್ಲಿ ಮತ್ತಷ್ಟು ಭರ್ಜರಿ ಪ್ರದರ್ಶನ ನೀಡಿದರೆ, ರೋಹಿತ್ ಕ್ಯಾಪ್ಟನ್ ಕೊಹ್ಲಿಯನ್ನ ಹಿಂದಕ್ಕೆ ಸರಿಸಲಿದ್ದಾರೆ.
Comments are closed.