
ನವದೆಹಲಿ: ಸ್ನಾಯು ಸೆಳೆತದಿಂದಾಗಿ ಮುಂದಿನ ನಡೆಯುವ ಮೂರು ಪಂದ್ಯಗಳಿಗೆ ಟೀ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂಡದಿಮದ ಹೊರಗೆ ಉಳಿಯಲಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ, ವೆಸ್ಟ್ ವಿಂಡೀಸ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಹೀಗಾಗಿ ಭುವನೇಶ್ವರ್ ಕುಮಾರ್ ಸ್ಥಾನವನ್ನ ಟೀಮ್ ಇಂಡಿಯಾದ ಮತ್ತೊಬ್ಬ ವೇಗಿ ಮೊಹಮದ್ ಶಮಿ ತುಂಬುವುದು ಬಹುತೇಕ ಖಚಿತವಾಗಿದೆ. ಬೌನ್ಸ್ ಟ್ರ್ಯಾಕ್ನಲ್ಲಿ ಆಡಿದ ಅನುಭವ ಹೊಂದಿರುವ ಶಮಿ, ಭುವೇಶ್ವರ್ ಅನುಪಸ್ಥಿತಿ ಕಾಡದಂತೆ ಪ್ರದರ್ಶನ ನೀಡಬಲ್ಲರು ಎಂಬ ವಿಶ್ವಾಸ ತಂಡದಲ್ಲಿದೆ.
ಇನ್ನು ಈ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿಯೂ ಪ್ರತಿಕ್ರಿಯೆ ನೀಡಿದೆ. ಮುಂದಿನ ಮೂರು ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಸ್ಥಾನವನ್ನ ಮಹಮದ್ ಶಮಿ ತುಂಬಲಿದ್ದಾರೆ ಎಂದು ಸ್ಪಷ್ಟಪಡಸಿದ್ದಾರೆ.
ಒಟ್ಟಾರೇಯಾಗಿ ಈ ಬಾರಿ ವಿಶ್ವಕಪ್ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾಗೆ ಭುವನೇಶ್ವರ್, ಶಿಖರ್ ಧವನ್ ಅನುಪಸ್ಥಿತಿ ಕಾಡಿದರೂ ಸಹ ಅವರ ಸ್ಥಾನ ತುಂಬಬಲ್ಲ ಆಟಗಾರರು ತಂಡದಲ್ಲಿ ಇರುವುದು ಸಮಾಧಾನದ ಸಂಗತಿ. ಆದರೆ, ಅವರ ಅನುಪಸ್ಥಿತಿಯನ್ನ ಎಷ್ಟರ ಮಟ್ಟಿಗೆ ಮಹಮದ್ ಶಮಿ ತುಂಬುತ್ತಾರೆ ಅನ್ನೋದು ಕಾದು ನೋಡಬೇಕಿದೆ.
Comments are closed.