ಕ್ರೀಡೆ

ವಿಶ್ವಕಪ್ ಇತಿಹಾಸದಲ್ಲೇ ಮಳೆಯಿಂದ ರದ್ದಾದ ಪಂದ್ಯಗಳ ದಾಖಲೆ

Pinterest LinkedIn Tumblr


ನಾಟಿಂಗ್ ಹ್ಯಾಮ್(ಲಂಡನ್): ಇಂಗ್ಲೆಂಡ್ ನಲ್ಲಿ ಸುರಿಯುತ್ತಿರುವ ಮಳೆ, ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದ್ದು, ಗುರುವಾರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಡೆಯಬೇಕಿದ್ದ ಟೀಂ ಇಂಡಿಯಾ-ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಯಿಂದ ರದ್ದಾಗಿದೆ.

ಈ ಟೂರ್ನಿಯಲ್ಲಿ ಮಳೆಯಿಂದ ರದ್ದಾದ ನಾಲ್ಕನೇ ಪಂದ್ಯ ಎಂಬ ಹೆಗ್ಗಳಿಕೆ ಇದಾಗಿದೆ. ಬಿಟ್ಟು ಬಿಡದೆ ಸುರಿದ ಮಳೆಯಿಂದ ಟಾಸ್ ಸಹ ನಡೆಯದಂತಾಯಿತು. ಪರಿಣಾಮ ಹಲವು ಗಂಟೆಗಳ ಕಾಯ್ದ ಬಳಿಕ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. ಇದರಿಂದಾಗಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗಿದೆ. ಭಾರತ ಟೂರ್ನಿಯಲ್ಲಿ 5 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಹಾಗೂ ನ್ಯೂಜಿಲೆಂಡ್ 7 ಅಂಕ ಗಳೊಂದಿಗೆ ಮೊದಲ ಸ್ಥಾನದಲ್ಲಿವೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಜಯ ಹಾಗೂ ಎರಡನೇ ಪಂದ್ಯದಲ್ಲಿ 36 ರನ್ ಗಳಿಂದ ಆಸೀಸ್ ವಿರುದ್ಧ ಗೆಲುವು ದಾಖಲಿಸಿದ್ದ ವಿರಾಟ್ ಪಡೆ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿತ್ತು.

ಬ್ಲ್ಯೂ ಬಾಯ್ಸ್ ಕನಸಿಗೆ ಮಳೆ ತಣ್ಣೀರು ಹಾಕಿದೆ. ವಿರಾಟ್ ಪಡೆ ನಾಲ್ಕನೇ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾನುವಾರ ಆಡಲಿದೆ. ನ್ಯೂಜಿಲೆಂಡ್ ತಂಡ ಜೂನ್ 19 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ

Comments are closed.