ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಸವ್ಯಸಾಚಿ ಕ್ರಿಕೆಟಿಗ ಯುವರಾಜ್ ಸಿಂಗ್!

Pinterest LinkedIn Tumblr

ಮುಂಬಯಿ: ಒಂದೇ ಓವರಿನಲ್ಲಿ ಆರು ಸಿಕ್ಸರ್ ಸಿಡಿಸಿದ ಸರದಾರ, 2011ರ ವಿಶ್ವಕಪ್ ವಿಜಯದ ರೂವಾರಿ, ಹೊಡೆಬಡಿಯ ಸವ್ಯಸಾಚಿ ಯುವರಾಜ್ ಸಿಂಗ್ ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

32 ವರ್ಷದ ಯುವರಾಜ್ ಸಿಂಗ್ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ವಿಫಲರಾಗಿದ್ದರು. ಕೊನೆಯ ಹಂತದಲ್ಲಿ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುವ ಭರವಸೆಯಲ್ಲಿದ್ದ ಯುವಿಗೆ ನಿರಾಸೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ಯುವಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ.

2003ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. 40 ಟೆಸ್ಟ್ ಆಡಿರುವ ಯುವಿ 1900 ರನ್ ಬಾರಿಸಿದ್ದಾರೆ. ಇನ್ನು 11 ಅರ್ಧ ಶತಕ ಹಾಗೂ 3 ಶತಕ ಬಾರಿಸಿದ್ದಾರೆ.

Comments are closed.