ಕ್ರೀಡೆ

ತೀವ್ರ ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್’ನ ಈ ಫೋಟೋ !

Pinterest LinkedIn Tumblr

ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದು ಇದರ ಮಧ್ಯೆ ಕೆಎಲ್ ರಾಹುಲ್ ಅವರು ಡೇಟಿಂಗ್ ವಿಚಾರ ಬಯಲಿಗೆ ಬಂದಿದೆ. ಇನ್ನು ಇಬ್ಬರು ನಟಿಯರ ಹೆಸರು ಕೆಎಲ್ ರಾಹುಲ್ ಜತೆ ತಳುಕು ಹಾಕಿಕೊಂಡಿದ್ದು ಇವರಲ್ಲಿ ಯಾರು ಎಂಬ ಪ್ರಶ್ನೆ ಮೂಡಿದೆ.

https://www.instagram.com/p/Bwrl4SnBwcV/?utm_source=ig_embed

ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಲಿಯಾ ಭಟ್ ಗೆಳತಿ ಆಕಾಂಕ್ಷಾ ರಂಜನ್ ನಡುವೆ ಏನೋ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿಯಾಗಿದ್ದು ಆಕಾಂಕ್ಷಾ ರಂಜನ್ ಅವರು ಪೋಸ್ಟ್ ಮಾಡಿರುವ ಫೋಟೋ. ಹೌದು ಆಕಾಂಕ್ಷಾ ಕೆಎಲ್ ರಾಹುಲ್ ಜೊತೆಗಿನ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಈ ಫೋಟೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೌದು, ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡುತ್ತಿರುವ ಕೆಎಲ್ ರಾಹುಲ್ ಅವರನ್ನು ಹುರಿದುಂಬಿಸುವ ಸಲುವಾಗಿ ಆಕಾಂಕ್ಷಾ ಇಂಗ್ಲೆಂಡ್ ಗೆ ಹಾರಿದ್ದಾರೆ. ಇದು ಇವರಿಬ್ಬರ ನಡುವೆ ಗುಸುಗುಸು ಶುರುವಾಗಲು ಕಾಣವಾಗಿದೆ. ಇನ್ನು ಇದಕ್ಕೂ ಮುನ್ನ ಜನ್ನತ್ ಚಿತ್ರದ ನಟಿ ಸೋನಾಲ್ ಚೌಹಾಣ್ ಹೆಸರು ಕೂಡ ಕೆಎಲ್ ರಾಹುಲ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸೋನಾಲ್ ಈ ವರದಿ ಸಂಪೂರ್ಣ ಸುಳ್ಳು. ಕೆಎಲ್ ರಾಹುಲ್ ಒಳ್ಳೆಯ ಕ್ರಿಕೆಟರ್. ಪ್ರತಿಭಾವಂತ ಮತ್ತು ಒಳ್ಳೆಯ ವ್ಯಕ್ತಿ ಎಂದು ಹೇಳಿ ತಮ್ಮ ವಿರುದ್ಧದ ಗಾಸಿಬ್ ಗೆ ಅಂತ್ಯವಾಡಿದ್ದಾರೆ.

Comments are closed.