ನವದೆಹಲಿ: ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡ ಮಾಜಿ ಓಪನಿಂಗ್ ಬ್ಯಾಟ್ಸ್ಮೆನ್ ಆಗಿದ್ದ ವಾಸೀಂ ಜಾಫರ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿರುವುದನ್ನು ಗುರುವಾರ ತಿಳಿಸಿದೆ.
ಅಷ್ಟೇ ಅಲ್ಲದೇ ಬಾಂಗ್ಲಾದೇಶ ಕ್ರಿಕೆಟ್ ಆಟವನ್ನು ಉನ್ನತ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸುವಂತೆ ಅವರನ್ನು ನೇಮಕ ಮಾಡಿಕೊಂಡಿದ್ದು ಅವರು ಅದಷ್ಟು ಬೇಗ ಬಿಸಿಬಿಗೆ ಸೇರಿಕೊಳ್ಳಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ.
ಮಾಜಿ ಭಾರತೀಯ ರಾಷ್ಟ್ರೀಯ ಕ್ರಿಕೆಟಿಗನ ಒಪ್ಪಂದವು ಆರು ತಿಂಗಳ ಕಾಲ ನಡೆಯುತ್ತದೆ, ರಾಜಧಾನಿ ಢಾಕಾದಲ್ಲಿರುವ ಅಕಾಡೆಮಿಯಲ್ಲಿ ವಿವಿಧ ವಯೋಮಾನದ ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳೊಂದಿಗೆ ಕೆಲಸ ಮಾಡಲು ಅವರು ಆಯ್ಕೆಯಾಗಿದ್ದಾರೆ.
ಸದ್ಯ ವಾಸೀಂ ಜಾಫರ್ಗೆ 41 ವರ್ಷ ವಯಸ್ಸಾಗಿದ್ದು ಭಾರತ ದೇಶಿಯ ವಿದರ್ಭ ಕ್ರಿಕೆಟ್ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಇವರು 2018-2019 ಸಾಲಿನಲ್ಲಿ ಬ್ಯಾಕ್ ಟು ಬ್ಯಾಕ್ ಇರಾನಿ ಟ್ರೋಪಿ ಮತ್ತು ರಣಜಿ ಟ್ರೋಪಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮಾರ್ಚ್ನಲ್ಲಿ ಢಾಕಾ ಪ್ರಿಮಿಯರ್ ಲೀಗ್ನಲ್ಲಿ ಅಬಹನಿ ಲಿಮಿಟೆಡ್ಗಾಗಿ ಆಡಿದ ಕಾರಣದಿಂದಾಗಿ ಬಿಸಿಬಿ ಅಧಿಕಾರಿಗಳು ವಾಸೀಂ ಜಾಫರ್ ಆಯ್ಕೆ ಮಾಡಿಕೊಂಡಿದ್ದಾರೆ. ಖಾಲ್ದ್ ಮಹಮೂದ್ ಸುಜನ್, ಅಬಹಾನಿ ತರಬೇತುದಾರರ ಇಬ್ಬರು ಮಾಜಿ ಬಾಂಗ್ಲಾದೇಶದ ಕ್ರಿಕೆಟಿಗರಾಗಿದ್ದರು. ಅವರು ಜಾಫರ್ನನ್ನು ನೇಮಕ ಮಾಡುವಲ್ಲಿ ಆಸಕ್ತಿಯನ್ನು ತೋರಿಸಿದರು. ಖಲೀದ್ ಮಹ್ಮುದ್ ಕೂಡ ನಿರ್ದೇಶಕ ಮತ್ತು ಬಿಸಿಬಿಯ ಆಟದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದಾರೆ.