ಕ್ರೀಡೆ

ಮುಂಬೈ ಇಂಡಿಯನ್ಸ್‌ ತಂಡದ ಪೊಲಾರ್ಡ್‌’ಗೆ ಪಂದ್ಯದ ಶುಲ್ಕದ ಶೇ. 25 ರಷ್ಟು ದಂಡ ವಿಧಿಸಿದ್ದು ಏಕೆ ಗೊತ್ತೇ ?

Pinterest LinkedIn Tumblr

ಹೈದರಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಅಂಪೈರ್‌ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಕೀರಾನ್‌ ಪೊಲಾರ್ಡ್‌ ಅವರಿಗೆ ಪಂದ್ಯದ ಶುಲ್ಕದ ಶೇ. 25 ರಷ್ಟು ದಂಡ ವಿಧಿಸಲಾಗಿದೆ.

ಭಾನುವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆದ 12ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಕೇವಲ ಒಂದು ರನ್‌ ನಿಂದ ರೋಚಕ ಗೆಲುವು ಸಾಧಿಸಿತ್ತು. ಕೀರಾನ್‌ ಪೊಲಾರ್ಡ್‌(41*) ಮೊದಲ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ತೀರ್ಪುಗಾರ ನಿತಿನ್‌ ಮೆನನ್‌ ಅವರ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಡ್ವೇನ್‌ ಬ್ರಾವೊ ಎಸೆದ ಎಸೆತ ವೈಡ್ ಆಗಿದ್ದರಿಂದ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೊಲಾರ್ಡ್‌ ಅಂಪೈರ್‌ ತೀರ್ಪಿಗೆ ಅಸಮಾಧಾನ ಸೂಚಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ವೆಸ್ಟ್‌ ಇಂಡೀಸ್ ಆಟಗಾರ ಮುಂದಿನ ಎಸೆತದಲ್ಲಿ ವೈಡ್‌ ಲೈನ್‌ ಮೇಲೆ ನಿಂತು ಬ್ಯಾಟಿಂಗ್‌ ಮಾಡಲು ಮುಂದಾದರು. ಈ ವೇಳೆ ಬ್ರಾವೊ ಎಸೆತವನ್ನು ಎದುರಿಸದೇ ಸ್ವತಃ ಅವರೇ ಬಿಟ್ಟರು.

ನಂತರ, ಮೈದಾನದಲ್ಲಿದ್ದ ಇಬ್ಬರೂ ಅಂಪೈರ್‌ಗಳಾದ ಮೆನನ್‌ ಹಾಗೂ ಇಯಾನ್‌ ಗೌಲ್ಡ್‌ ಅವರು ಸಾಮಾನ್ಯವಾಗಿ ವಿಕೆಟ್‌ ಮುಂದೆ ನಿಂತು ಬ್ಯಾಟಿಂಗ್‌ ಮಾಡುವಂತೆ ಪೊಲಾರ್ಡ್‌ಗೆ ಸೂಚಿಸಿದರು. ಈ ವೇಳೆ ತೀರ್ಪುಗಾರರು ಹಾಗೂ ವಿಂಡೀಸ್‌ ಆಟಗಾರನ ನಡುವೆ ವಾದ-ವಿವಾದ ನಡೆಯಿತು.

ಅಂತಿಮವಾಗಿ 7 ವಿಕೆಟ್‌ ಕಳೆದುಕೊಂಡ 148 ರನ್ ದಾಖಲಿಸಿದ ಮುಂಬೈ ಇಂಡಿಯನ್ಸ್, ಎರಡನೇ ಇನಿಂಗ್ಸ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಸಂಪೂರ್ಣವಾಗಿ ನಿಯಂತ್ರಿಸಿತು. ಕೇವಲ ಒಂದು ರನ್‌ನಿಂದ ಗೆದ್ದು ಮುಂಬೈ ನಾಲ್ಕನೇ ಬಾರಿ ಐಪಿಎಲ್‌ ಚಾಂಪಿಯನ್‌ ಆಯಿತು.

ಪಂದ್ಯದ ಬಳಿಕ ಪೊಲಾರ್ಡ್‌ ಮೇಲೆ ಐಪಿಎಲ್‌ ದಂಡ ವಿಧಿಸಿತು. ಆದರೆ, ನಿಗದಿತ ಯಾವ ಅಪರಾಧಕ್ಕೆ ಆಲ್‌ರೌಂಡರ್ ಗೆ ದಂಡ ವಿಧಿಸಲಾಗಿದೆ ಎಂಬುದು ಹೇಳಿಕೆಯಲ್ಲಿ ಉಲ್ಲೇಖ ಮಾಡಿಲ್ಲ.

Comments are closed.