ಕರ್ನಾಟಕ

ತನ್ನ ಕೊಠಡಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಪ್ರಚೋದನೆ ಕಾರ್ಯ ನಡೆಸಿದ ಶಿಕ್ಷಕ! ವಿಡಿಯೋ ವೈರಲ್

Pinterest LinkedIn Tumblr

ಬಾಗಲಕೋಟೆ: ಮಕ್ಕಳಿಗೆ ಪಾಠ ಹೇಳಿಕೊಟ್ಟು, ಅವರನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕನಿಗೆ ಸಮಾಜದಲ್ಲಿ ಅತ್ಯುತ್ತಮ ಸ್ಥಾನವಿದೆ. ಗುರುವನ್ನು ದೇವರ ಸ್ಥಾನದಲ್ಲಿಟ್ಟು ಗೌರವಿಸುವ ಸಂಪ್ರದಾಯ ನಮ್ಮಲ್ಲಿದೆ. ಇಂತಹ ಸ್ಥಾನದಲ್ಲಿ ಇರುವ ಗುರು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಅದು ಮಕ್ಕಳ ಮೇಲೆ ಸಮಾಜದ ಮೇಲೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೆ.

ಹಾಸನ ಕಾಲೇಜೊಂದರ ಪ್ರಾಂಶುಪಾಲ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದು ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೆ ಅಂತಹದ್ದೆ ಘಟನೆ ಬಾಗಲಕೋಟೆಯಲ್ಲೂ ನಡೆದಿದೆ.

ಶಾಲೆಯ ಶಿಕ್ಷಕನೊರ್ವ ತನ್ನ ಕೊಠಡಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಪ್ರಚೋದನೆ ಕಾರ್ಯ ನಡೆಸಿದ್ದಾನೆ. ಆತ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿ, ಇದೀಗ ವಿಡಿಯೋ ವೈರಲ್​ ಆಗಿದೆ.

Comments are closed.