ಕ್ರೀಡೆ

ತನಗಿಂತ 15ರ ಕಿರಿಯನ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೆನ್ ನಿಶ್ಚಿತಾರ್ಥ?

Pinterest LinkedIn Tumblr


ಮುಂಬೈ: ಮಾಜಿ ವಿಶ್ವ ಸುಂದರಿ, ನಟಿ ಸುಶ್ಮಿತಾ ಸೇನ್ ತಮಗಿಂತ 15 ವರ್ಷದ ಕಿರಿಯ ತನ್ನ ಪ್ರಿಯಕರ ರೋಹ್ಮನ್ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಈಗ ಶುರುವಾಗಿದೆ.

ಇತ್ತೀಚೆಗೆ ಸುಶ್ಮಿತಾ ಸೇನ್ ತನ್ನ ಪ್ರಿಯಕರ ರೋಹ್ಮಲ್ ಜೊತೆ ಇರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುಶ್ಮಿತಾ ಬೆರಳಲ್ಲಿ ನೀಲಿ ಬಣ್ಣದ ಉಂಗುರವನ್ನು ಧರಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸುಶ್ಮಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಫೋಟೋ ನೋಡಿದ ಕೆಲವು ಅಭಿಮಾನಿಗಳು ಸುಶ್ಮಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಇನ್‍ಸ್ಟಾಗ್ರಾಂನಲ್ಲಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸುಶ್ಮಿತಾ ಆಗಲಿ, ರೋಹ್ಮಲ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸುಶ್ಮಿತಾ ಹಾಗೂ ರೋಹ್ಮನ್ ಫ್ಯಾಶನ್ ಗಾಲಾ ಎಂಬ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಭೇಟಿ ವೇಳೆ ಇಬ್ಬರು ಪರಸ್ಪರ ಸ್ನೇಹ ಬೆಳೆಸಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಗೆ ತಿರುಗಿದೆ. ಅಲ್ಲದೇ ಕೆಲವು ವಾರಗಳ ಹಿಂದೆಯಷ್ಟೇ, ರೋಹ್ಮನ್ ಸುಶ್ಮಿತಾಗೆ ಪ್ರೊಪೋಸ್ ಮಾಡಿದ್ದರು. ಪ್ರೊಪೋಸಲ್‍ಗೆ ಸುಶ್ಮಿತಾ ಒಪ್ಪಿಗೆ ನೀಡಿ, ಒಟ್ಟಿಗೆ ಓಡಾಡುತ್ತಿದ್ದರು. ಸುಶ್ಮಿತಾ ಹಾಗೂ ರೋಹ್ಮನ್ 2019ರಲ್ಲಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟಿಸಿತ್ತು.

Comments are closed.