ಕ್ರೀಡೆ

ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿಗೆ ಮತ್ತೆ ಸೋಲು 

Pinterest LinkedIn Tumblr
ಮುಂಬೈ:  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 12 ನೇ ಆವೃತ್ತಿಯ ಟೂರ್ನಿಯಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್  ಐದು ವಿಕೆಟ್ ಗಳ ಸೋಲು  ಅನುಭವಿಸಿದೆ.
ಕಳೆದ ಪಂದ್ಯವನ್ನು ಗೆದ್ದ ಹುಮ್ಮಸ್ಸಿನಿಂದಲೇ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತ್ತು. ನಾಯಕ ವಿರಾಟ್ ಕೊಹ್ಲಿ ಕೇವಲ 8 ರನ್  ಗಳಿಸಿ ಬೆಹ್ರಾನ್ ಡರ್ಪ್  ಎಸೆತದಲ್ಲಿ ವಿಕೆಟ್ ಕೀಪರ್ ಡಿಕಾಕ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಪಾರ್ಥಿವ್ ಪಟೇಲ್  28  ಗಳಿಸಿದಾಗ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಯಾದವ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ  ಜೊತೆಯಾದ ಎಬಿ ಡಿವಿಲಿಯರ್ಸ್ ಹಾಗೂ ಎಂಎಂ ಆಲಿ ಕ್ರಮವಾಗಿ 75 ಹಾಗೂ 50 ರನ್  ಗಳಿಸುವ ಮೂಲಕ ಆರ್ ಸಿಬಿ ರನ್  ಹೆಚ್ಚಲು ಕಾರಣರಾದರು.
ಡಿವಿಲಿಯರ್ಸ್ ಅವರನ್ನು ಪೊಲಾರ್ಡ್ ರನ್ ಔಟ್ ಮಾಡಿದರೆ, ಎಂಎಂಆಲಿ ಮಾಲಿಂಗ ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ನಂತರ ಎಂಪಿ ಸ್ಟೊಯಿನಿಸ್, ಡೆಕ್ ಔಟ್ ಆದರೆ, ಎಡಿ ನಾಥ್ 2, ರನ್ ಗಳಿಸಿ ಮಾಲಿಂಗ ಬೌಲಿಂಗ್ ನಲ್ಲಿ ಔಟ್ ಆದರು.
ಮುಂಬೈ ಇಂಡಿಯನ್ಸ್ ಪರ ಮಾಲಿಂಗ 4 ವಿಕೆಟ್ , ಹಾರ್ದಿಕ್ ಪಾಂಡ್ಯ ಹಾಗೂ ಜೆಪಿ ಬೆಹ್ರೆನ್ ಡರ್ಪ್ ತಲಾ 1  ವಿಕೆಟ್ ಪಡೆದುಕೊಂಡರು
172 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್  19 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಆರಂಭಿಕ ಆಟಗಾರರಾದ ಕ್ಯೂಡಿ ಕಾಕ್ 40 ಗಳಿಸಿ ಆಲಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂಗೆ ಬಲಿಯಾದರು. ರೋಹಿತ್ ಶರ್ಮಾ 28 ರನ್ ಗಳಿಸಿ ಆಲಿ ಬೌಲಿಂಗ್ ನಲ್ಲಿ ಔಟಾದರು. ನಂತರ ಬಂದಂತಹ ಆಟಗಾರರಾದ ಎಸ್ ಎ ಯಾದವ್ 29, ಇಶಾಂತ್ ಕಿಶಾನ್ 21, ಕೆಹೆಚ್ ಪಾಂಡ್ಯ 11, ಹಾರ್ದಿಕ್ ಪಾಂಡ್ಯ 37 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನ ದಡ ಸೇರಿಸಿದರು.
ಆರ್ ಸಿಬಿ ಪರ ಚಾಹಲ್ ಹಾಗೂ ಎಂಎಂಆಲಿ ತಲಾ 2 ವಿಕೆಟ್ ಪಡೆದುಕೊಂಡರು. ಲಸಿತ್ ಮಾಲಿಂಗ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Comments are closed.