ಬೆಂಗಳೂರು: ಐಪಿಎಲ್ ನಲ್ಲಿ ಆರ್‌ಸಿಬಿ ತಂಡಕ್ಕೆ ಸತತ ಸೋಲು ಒಂದು ಕಡೆಯಾದರೆ ಇನ್ನು ತಂದೆ ಬ್ರೈನ್ ಹೆಮರೇಡ್ಜ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವುದು ಆರ್ಸಿಬಿ ತಂಡದ ಆಟಗಾರ ಪಾರ್ಥಿವ್ ಪಟೇಲ್ ರನ್ನು ತಲ್ಲಣಗೊಳಿಸಿವೆ.
ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಸಮತೋಲನ ಮಾಡಿಕೊಳ್ಳಲು ಪಾರ್ಥಿವ್ ಪಟೇಲ್ ಗೆ ಕಷ್ಟವಾಗುತ್ತಿದೆ. ಪ್ರತಿ ಪಂದ್ಯದ ಬಳಿಕ ಪೆವಿಲಿಯನ್ ಗೆ ಹೋದ ತಕ್ಷಣ ತಮ್ಮ ಮೊಬೈಲ್ ತೆಗೆದು ನೋಡುತ್ತಾರಂತೆ. ಅಲ್ಲಿ ತನ್ನ ತಂದೆಯ ಕುರಿತಾಗಿ ಯಾವುದೇ ಕೆಟ್ಟ ಸುದ್ದಿ ಬಂದಿರಲ್ಲ ಎಂಬ ಪ್ರಾರ್ಥನೆಯೊಂದಿಗೆ ಮೊಬೈಲ್ ತೆರೆಯುತ್ತಾರಂತೆ.
ಇವೆಲ್ಲಾ ಜಂಜಾಟಗಳ ನಡುವೆ ತನಗೆ ಕ್ರಿಕೆಟ್ ನಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತಿದೆ ಎಂದು ಪಾರ್ಥಿವ್ ಪಟೇಲ್ ಹೇಳಿಕೊಂಡಿದ್ದಾರೆ.
Comments are closed.