ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಆರನೇ ಬಾರಿಗೆ ಸೋಲನ್ನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತ್ತು. ಈ ಗುರಿಯನ್ನು ಕೇವಲ 18. 4 ಓವರ್ ಗಳಲ್ಲಿಯೇ ದಾಟಿದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ಗಳ ಗೆಲುವಿನ ನಗೆ ಬೀರಿತು.
ಈ ಮೂಲಕ ಸತತ ಆರು ಸೋಲುಗಳೊಂದಿಗೆ ಈ ಬಾರಿಯ ಐಪಿಎಲ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆದರೆ, 9 ರನ್ ಆಗುವಷ್ಟರಲ್ಲಿ ಪಾರ್ಥಿವ್ ಪಟೇಲ್ ಲಾಮಿಚ್ಚಾನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಾಯಕ ವಿರಾಟ್ ಕೊಹ್ಲಿ ರಾಬಡಾ ಬೌಲಿಂಗ್ ನಲ್ಲಿ ಲೈಯರ್ ಗೆ ಕ್ಯಾಚ್ ನೀಡುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಎಬಿ ಡಿವಿಲಿಯರ್ಸ್ 17 ರನ್ ಗಳಿಸಿದರೆ, ಎಂಪಿ ಸ್ಟೊಯ್ನೀಸ್ 15, ಎಂಎಂಆಲಿ 32, ಎಡಿ ನಾಥ್ 19 ರನ್ ಗಳಿಗೆ ರಾಬಡಾ ಬೌಲಿಂಗ್ ನಲ್ಲಿ ಪಂಥ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಪಿ ನೇಗಿ ಕೂಡಾ ರಾಬಡಾ ಬೌಲಿಂಗ್ ನಲ್ಲಿಯೇ ಔಟ್ ಆದರು. ನಂತರ ಮೊಹಮ್ಮದ್ ಸಿರಾಜ್ ಮೊರೀಸ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಗೆ ಬಲಿಯಾದರು.ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ ರಾಬಡಾ 4, ಸಿಹೆಚ್ ಮೊರೀಸ್ 2 , ಎಆರ್ ಪಟೇಲ್ ಹಾಗೂ ಲ್ಯಾಮಿಚಾನೆ ತಲಾ 1 ವಿಕೆಟ್ ಪಡೆದುಕೊಂಡರು.
ಆರ್ ಸಿಬಿ ನೀಡಿದ 150 ರನ್ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ ಪಿಪಿ ಶಾ 28ರನ್ ಗಳಿಸಿದರೆ, ಶಿಖರ್ ಧವನ್ ಶೂನ್ಯಕ್ಕೆ ಔಟಾಗುವ ಮೂಲಕ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಎಸ್ ಎಸ್ ಲೈಯರ್ 67, ಸಿಎ ಇಂಗ್ರಾಮ್ 22, ರಿಷಬ್ ಪಂತ್ 18 ರನ್ ಗಳಿಸಿದರು. ಸಿಹೆಚ್ ಮೊರೀಸ್ ಶೂನ್ಯಕ್ಕೆ ಔಟಾದರೆ, ಎಆರ್ ಪಟೇಲ್ 4 ರನ್ ಗಳಿಸಿದರು. ಇನ್ನೂ 4 ವಿಕೆಟ್ ಬಾಕಿ ಇರುವಂತೆಯೇ 18. 5 ಓವರ್ ಗಳಲ್ಲಿ 152 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿತು.
Comments are closed.