ಕ್ರೀಡೆ

ರಾಜಸ್ಥಾನ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್

Pinterest LinkedIn Tumblr

ಜೈಪುರ: ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಕೋಲ್ಕತಾ ಬೌಲರ್ ಗಳ ಸಾಂಘಿಕ ಮತ್ತು ಶಿಸ್ತು ಬದ್ಧ ದಾಳಿಯಿಂದಾಗಿ ರಾಜಸ್ಥಾನ ತಂಡದ ದಾಂಡಿಗರು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು. ಸ್ಟೀವ್ ಸ್ಮಿತ್ ಅಜೇಯ 73 ರನ್ ಗಳಿಸಿದರೆ, ಜಾಸ್ ಬಟ್ಲರ್ 37 ರನ್ ಗಳಿಸಿದರು. ಆ ಮೂಲಕ ಕೋಲ್ಕತಾಗೆ 140ರನ್ ಗಳ ಸಾಮಾನ್ಯ ಗುರಿ ನೀಡಿತು.

ಈ ಮೊತ್ತವನ್ನು ಬೆನ್ನು ಹತ್ತಿದ ಕೋಲ್ಕತಾ ತಂಡ ಕ್ರಿಸ್ ಲಿನ್ ಅವರ ಆಕರ್ಷಕ ಅರ್ಧಶತಕ ಹಾಗೂ ಸುನಿಲ್ ನರೇನ್ (47 ರನ್)ರ ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ ಕೋಲ್ಕತಾ ತಂಡ ಕೇವಲ 13.5 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿ 8ವಿಕೆಟ್ ಭರ್ಜರಿ ಜಯ ಸಾಧಿಸಿತು.

ಇನ್ನು ಕೋಲ್ಕತಾ ಪರ 2 ವಿಕೆಟ್ ಪಡೆದು ರಾಜಸ್ಥಾನ ತಂಡವನ್ನು ಕಟ್ಟಿ ಹಾಕಿದ್ದ ಹ್ಯಾರಿ ಗರ್ನಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Comments are closed.