ಕ್ರೀಡೆ

ಅಶ್ವಿನ್ ಮಾಡಿದ ಮಂಕಡ್ ರನೌಟನ್ನು ಮೈದಾನದಲ್ಲೇ ಅಣುಕಿಸುವ ಮೂಲಕ ಕೃನಾಲ್ ಪಾಂಡ್ಯ ಮಾಡಿದ್ದೇನು ಗೊತ್ತಾ..?

Pinterest LinkedIn Tumblr

ಬೆಂಗಳೂರು: ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಅವರು ರಾಜಸ್ತಾನ ತಂಡದ ಜಾಸ್ ಬಟ್ಲರ್ ಮಂಕಡ್ ರನೌಟ್ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಅಶ್ವಿನ್ ಕ್ರೀಡಾ ಸ್ಪೂರ್ತಿ ಇಲ್ಲದ ಕ್ರಿಕೆಟಿಗ ಎಂಬ ಟೀಕೆಗೆ ಗುರಿಯಾಗಿದ್ದರು. ಇದೀಗ ಕೃನಾಲ್ ಪಾಂಡ್ಯ ಮೈದಾನದಲ್ಲೇ ಅಶ್ವಿನ್ ರನ್ನು ಅಣುಕಿಸುವ ಮೂಲಕ ನೀವು ಮಾಡಿದ್ದು ಎಷ್ಟು ಸರಿ ಎಂಬಂತೆ ಪ್ರಶ್ನಿಸಿದ್ದಾರೆ.

ಮೊಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಇಂತಹದ್ದೇ ವಿದ್ಯಮಾನ ಪುನರಾವರ್ತನೆ ಆಗಿತ್ತು. ಆದರೆ ಕೃನಾಲ್ ಪಾಂಡ್ಯ ಪಂಜಾಬ್ ತಂಡದ ಮಾಯಾಂಕ್ ಅಗರ್ವಾಲ್ ರನ್ನು ಔಟ್ ಮಾಡಿಲ್ಲ ಬದಲಿಗೆ ಎಚ್ಚರಿಕೆ ನೀಡಿದ್ದರು.

ಈ ಮೂಲಕ ಕೃನಾಲ್ ಪಾಂಡ್ಯ ಪರೋಕ್ಷವಾಗಿ ಪಂಜಾಬ್ ತಂಡದ ನಾಯಕ ಅಶ್ವಿನ್ ರನ್ನು ಟ್ರೋಲ್ ಮಾಡಿದಂತಿತ್ತು. ಏಕೆಂದರೆ ಪ್ರತಿಯೊಬ್ಬ ಬೌಲರ್ ಗೂ ಮಂಕಡ್ ಮೂಲಕ ಔಟ್ ಮಾಡುವ ಅವಕಾಶ ಇರುತ್ತದೆ. ಇದಕ್ಕೂ ಮುನ್ನ ಒಂದು ಬಾರಿ ಬ್ಯಾಟ್ಸ್ ಮನ್ ಗೆ ಸೂಚನೆ ನೀಡಬೇಕು ಎಂಬುದನ್ನು ಕೃನಾಲ್ ತೋರಿಸಿಕೊಟ್ಟಂತಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಒಂದೆಡೆ ಕೃನಾಲ್ ಸ್ಪೋಟ್ಸ್ ಮನ್ ಸ್ಪಿರಿಟ್ ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಅಶ್ವಿನ್ ರನ್ನು ಮುಂಬೈ ಆಟಗಾರ ಮೈದಾನದಲ್ಲೇ ಟ್ರೋಲ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

Comments are closed.