ರಾಷ್ಟ್ರೀಯ

ನಿಜಾಂಶವನ್ನು ನಿರ್ಲಕ್ಷಿಸಿ ದೇಶದಿಂದ ಓಡಿ ಹೋಗಿರುವ ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ: ವಿಜಯ್ ಮಲ್ಯ

Pinterest LinkedIn Tumblr

ನವದೆಹಲಿ: 1992 ರಿಂದಲೂ ಇಂಗ್ಲೆಂಡ್ ಪ್ರಜೆಯಾಗಿರುವ ನಿಜಾಂಶವನ್ನು ನಿರ್ಲಕ್ಷಿಸಿ ದೇಶದಿಂದ ಓಡಿ ಹೋಗಿರುವ ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

1992ರಿಂದಲೂ ಇಂಗ್ಲೆಂಡ್ ಪ್ರಜೆಯಾಗಿದ್ದೇನೆ. ಆದರೂ, ನಿಜಾಂಶವನ್ನು ಮರೆಮಾಚಿ ದೇಶದಿಂದ ಓಡಿ ಹೋಗಿರುವೆ ಎಂದು ಬಿಜೆಪಿ ಹೇಳುತ್ತಿದೆ ಎಂದು ಟ್ವೀಟರ್ ಮೂಲಕ ವಾಗ್ದಾಳಿ ನಡೆಸಿರುವ ವಿಜಯ್ ಮಲ್ಯ, ಬಿಜೆಪಿ ವಿರುದ್ಧ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ.

ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮರಳಿ ಪಡೆಯುವುದಾಗಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳುತ್ತಾರೆ. ಆದರೆ, ಪಕ್ಷದ ವಕ್ತಾರರು ನನ್ನ ಮೇಲೆ ಟಾರ್ಗೆಟ್ ನ್ನು ಮುಂದುವರೆಸಿದ್ದಾರೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.

ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂ. ಮರು ಪಾವತಿಸಬೇಕಿದ್ದರೂ 14 ಸಾವಿರ ಕೋಟಿ ರೂ. ಮೌಲ್ಯದ ನನ್ನ ಆಸ್ತಿಯನ್ನು ಸರ್ಕಾರ ವಶಕ್ಕೆ ಪಡೆಯುವುದಾಗಿ ಮೋದಿ ಆ ಸಂದರ್ಶನದಲ್ಲಿ ಹೇಳಿದ್ದಾರೆ.ಉನ್ನತ ಸಂಸ್ಥೆ ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದರೂ ಬಿಜೆಪಿ ವಕ್ತಾರರು ನನನ್ನು ಏಕೆ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಲ್ಯ ಟ್ವಿಟ್ ಮಾಡಿದ್ದಾರೆ.

Comments are closed.