ಕ್ರೀಡೆ

6 ಭಾಷೆಯಲ್ಲಿ ಧೋನಿ ಕೇಳುವ ಪ್ರಶ್ನೆಗಳಿಗೆ ಪುತ್ರಿ ಜೀವಾ ನೀಡಿದ ಉತ್ತರ ಈಗ ವೈರಲ್!

Pinterest LinkedIn Tumblr

ಚೆನ್ನೈ: ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಥಟ್ ಅಂತಾ ಹೇಳಿ ಪ್ರಶ್ನೆಗಳ ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://www.instagram.com/p/BvZHMeSlO29/?utm_source=ig_embed&utm_campaign=embed_video_watch_again

ತಂದೆ ಕೇಳುವ ಪ್ರಶ್ನೆಗಳಿಗೆ ಬಹಳ ಜಾಣೆಯಾಗಿ ಜೀವಾ ಉತ್ತರಿಸಿರುವ ವಿಡಿಯೋ ಇದಾಗಿದ್ದು ಇದನ್ನು ದೋನಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರ ಮಹಾಪೂರವೇ ಹರಿದುಬಂದಿದೆ.

ಎಂಎಸ್ ಧೋನಿ ತಮಿಳಿನಲ್ಲಿ ಎಪ್ಪುಡಿ ಇರಿಕಿಂಗ ಎಂದು ಕೇಳಿದರೆ ನಲ್ಲ ಇರಿಕಿಂಗ ಎಂದಿದ್ದಾಳೆ. ಅಪ್ಪ ಮಾಶ ಅಲ್ಲಾ ಎಂದರೆ ಮಗಳು ಇನ್ಶಾ ಅಲ್ಲಾ ಎಂದಿದ್ದಾಳೆ. ಜೀವಾ ಉತ್ತರಗಳನ್ನು ಕೇಳಿದ ನೆಟಿಗರು ತಲೆದೂಗಿದ್ದಾರೆ.

ಐಪಿಎಲ್ 2019ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ನಂತರ ಮಗಳು ಜೀವಾ ಜತೆ ಧೋನಿ ಆನಂದದಿಂದ ಸ್ವಲ್ಪ ಸಮಯ ಕಳೆದಿದ್ದಾರೆ.

Comments are closed.