ಕ್ರೀಡೆ

ಟೀಂ ಇಂಡಿಯಾದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಿಷಬ್ ಪಂತ್ ಐಪಿಎಲ್ ನಲ್ಲಿ ಪರಾಕ್ರಮ!

Pinterest LinkedIn Tumblr

ಮುಂಬೈ: ಮಾಜಿ ನಾಯಕ ಎಂಎಸ್ ಧೋನಿಗೆ ಬದಲಿ ಆಟಗಾರ ಭವಿಷ್ಯದ ವಿಕೆಟ್ ಕೀಪರ್ ಎಂದೆಲ್ಲ ಗುರುತಿಸಿಕೊಂಡಿದ್ದ ರಿಷಬ್ ಪಂತ್ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಾಗ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಆದರೆ ಐಪಿಎಲ್ ನಲ್ಲಿ ಮಾತ್ರ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾ ತಮ್ಮ ಪರಾಕ್ರಮವನ್ನು ತೋರಿಸಿದ್ದಾರೆ.

ಹೌದು, ಟೀಂ ಇಂಡಿಯಾ ಪರ ಐದು ಏಕದಿನ ಪಂದ್ಯಗಳನ್ನು ಆಡಿರುವ ರಿಷಬ್ ಪಂತ್ ಕೇವಲ 93 ರನ್ ಗಳಿಸಿದ್ದಾರೆ. ಇನ್ನು 15 ಅಂತಾರಾಷ್ಟ್ರೀಯ ಟಿ20 ಪೈಕಿ 19.41ರ ಸರಾಸರಿಯಲ್ಲಿ 233 ರನ್ ಪೇರಿಸಿದ್ದಾರೆ. ಆದರೆ ಐಪಿಎಲ್ ನಲ್ಲಿ ಮಾತ್ರ ರಿಷಬ್ ಪಂತ್ ಆಡಿರುವ 14 ಪಂದ್ಯಗಳ ಪೈಕಿ 684 ರನ್ ಗಳಿಸಿದ್ದಾರೆ.

ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಪರ ಆಡಿದ್ದ ರಿಷಬ್ ಪಂತ್ 27 ಎಸೆತಗಳಲ್ಲೇ 7 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 78 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಐಪಿಎಲ್ ನಲ್ಲಿ ವಿಜೃಂಬಿಸುವ ರಿಷಬ್ ಪಂತ್ ರಾಷ್ಟ್ರೀಯ ತಂಡದಲ್ಲಿ ಆಡುವಾಗ ಮಾತ್ರ ಕಳಪೆ ಪ್ರದರ್ಶನ ನೀಡುತ್ತಿರುವುದು ಆಯ್ಕೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.

Comments are closed.