ಕರಾವಳಿ

ಊಟ ಆದ ತಕ್ಷಣ ಈ ತಪ್ಪನ್ನು ಖಂಡಿತವಾಗಿ ಮಾಡಲೇಬೇಡಿ!

Pinterest LinkedIn Tumblr

ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಆಹಾರವನ್ನು ಸೇವಿಸಿದ ನಂತರ ಒಂದು ಗಂಟೆಯ ವರೆಗೆ ನೀರನ್ನು ಸೇವಿಸಬಾರದು. ಏಕೆಂದರೆ ನಾವು ತಿಂದ ಆಹಾರ ಅನ್ನನಾಳಕ್ಕೆ ಹೋಗುತ್ತದೆ. ಅಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಕೆಟ್ಟ ಸೂಕ್ಷ್ಮಜೀವಿಗಳನ್ನು ಸಾಯಿಸಿ, ನಾವು ತಿಂದ ಆಹಾರವು ಸ್ವಲ್ಪವೂ ತುಂಡು ತುಂಡುಗಳಾಗಿ ಕತ್ತರಿಸುತ್ತದೆ.

ಈ ಪ್ರಕ್ರಿಯೆ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಹಾಗಲ್ಲದೆ ಆಹಾರವನ್ನು ತಿಂದ ತಕ್ಷಣ ನೀರನ್ನು ಸೇವಿಸಿದರೆ ಈ ಎಲ್ಲ ಕ್ರಿಯೆ ತಡವಾಗುತ್ತದೆ. ಹೊಟ್ಟೆಯಲ್ಲಿ ನೀರು ಹೆಚ್ಚಾಗಿ ಬಂದು ಸೇರುವುದರಿಂದ ಹೈಡ್ರೋಕ್ಲೋರಿಕ್ ಆಮ್ಲಗಳು ಡೈಲ್ಯೂಟ್ ಆಗುತ್ತದೆ.

ಆದ್ದರಿಂದ ಜೀರ್ಣ ನಂತರ ತ್ಯಾಜ್ಯಗಳು ಹಾಗೆಯೇ ಹೊಟ್ಟೆಯಲ್ಲಿಯೇ ಉಳಿದು ಹೋಗುತ್ತದೆ. ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಆಹಾರ ಸೇವಿಸುವ ಅರ್ಧ ಗಂಟೆಯ ಮುನ್ನ ಮತ್ತು ಆಹಾರ ಸೇವಿಸಿದ ಒಂದು ಗಂಟೆಯವರೆಗೂ ನೀರನ್ನು ಸೇವಿಸಬಾರದು.

ನೀರನ್ನು ಒಂದೇ ಬಾರಿ ಗಟಗಟನೆ ಕುಡಿಯದೇ ನಿಧಾನವಾಗಿ ಚಿಕ್ಕಚಿಕ್ಕ ಗುಟುಕುಗಳಾಗಿ ಕುಡಿಯಬೇಕು. ಗುಟುಕುಗಳಾಗಿ ಸೇವಿಸುವುದರಿಂದ ನಮ್ಮ ಬಾಯಿಯಲ್ಲಿರುವ ಲಾಲಾರಸ ದಲ್ಲಿ ಚೆನ್ನಾಗಿ ಮಿಶ್ರಣವಾಗಿ ದೇಹಕ್ಕೆ ಸರಿಯಾಗಿ ನೀರು ಸೇರುತ್ತದೆ. ಹೀಗೆ ನಿಧಾನವಾಗಿ ನೀರು ಸೇವಿಸದಿದ್ದರೆ ಬರುತ್ತದೆ. ಇದು ರಕ್ತದ ಮೇಲೆ ಪ್ರಭಾವ ತೋರಿಸುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಮೂರು ಗ್ಲಾಸ್ ನೀರನ್ನು ಸೇವಿಸಬೇಕು. ಹೀಗೆ ಕುಡಿಯುವುದರಿಂದ ದೇಹದಲ್ಲಿರುವ ಶೇಖರಣೆಯಾಗಿರುವ ತ್ಯಾಜ್ಯಗಳನ್ನು ಮಲ ವಿಸರ್ಜನೆಯಲ್ಲಿ ಹೊರಹಾಕುತ್ತದೆ. ಸರಿಯಾಗಿ ಮಲ ವಿಸರ್ಜನೆ ಆಗುವವರಿಗೆ ಅನಾರೋಗ್ಯ ಸಮಸ್ಯೆಗಳು ತುಂಬಾ ಕಡಿಮೆ.

ತುಂಬಾ ತಣ್ಣನೆಯ ನೀರನ್ನು ಖಂಡಿತವಾಗಿ ಸೇವಿಸಬಾರದು. ಇದು ತುಂಬಾ ಅಪಾಯಕಾರಿ. ನಮ್ಮ ದೇಹದಲ್ಲಿ ಯಾವಾಗಲೂ ಯಾವುದಾದರೂ ಕ್ರಿಯೆ ನಡೆಯುತ್ತಲೇ ಇರುತ್ತದೆ. ಇದರಿಂದ ಯಾವಾಗಲು ದೇಹದ ಉಷ್ಣತೆ ಇರುತ್ತದೆ.

ಆದ್ದರಿಂದ ಈ ಸಮಯದಲ್ಲಿ ತಂಪಾದ ನೀರನ್ನು ಕುಡಿದರೆ ಎರಡು ವಿರುದ್ಧ ಉಷ್ಣತೆ ಇರುವುದರಿಂದ ದೇಹದ ಮೇಲೆ ತುಂಬಾ ಪ್ರಭಾವವನ್ನು ತೋರಿಸುತ್ತದೆ. ಆದ್ದರಿಂದ ಐಸ್ ವಾಟರ್ ಅನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಿದ್ದಾರೆ. ತಂಪಾದ ನೀರನ್ನು ಕುಡಿಯಬೇಕೆಂದು ಆಸೆ ಪಟ್ಟರೆ ಮಡಿಕೆಯ ನೀರನ್ನು ಸೇವಿಸುವುದು ಉತ್ತಮ.

Comments are closed.