ಕ್ರೀಡೆ

ನ್ಯೂಜಿಲೆಂಡ್​ನ ಮಸೀದಿಗಳಲ್ಲಿ ಶೂಟೌಟ್​; ಕೂದಲೆಳೆಯ ಅಂತರದಲ್ಲಿ ಉಳಿದ ಬಾಂಗ್ಲಾ ಕ್ರಿಕೆಟ್​ ತಂಡ!

Pinterest LinkedIn Tumblr


ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನ ಕ್ರೈಸ್ಟ್​​ಚರ್ಚ್​​ನಲ್ಲಿರುವ ಎರಡು ಮಸೀದಿಗಳ ಮೇಲೆ ಶುಕ್ರವಾರ ಶೂಟೌಟ್​ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಬಾಂಗ್ಲಾ ಕ್ರಿಕೆಟ್​ ತಂಡದ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಹ್ಯಾಗ್ಲೆ ಪಾರ್ಕ್​ ಸಮೀಪ ಇದ್ದ ಮಸೀದಿ ಬಳಿ ಬಾಂಗ್ಲಾ ಕ್ರಿಕೆಟ್​ ತಂಡ ತೆರಳಿತ್ತು. ಗುಂಡಿನ ದಾಳಿ ನಡೆದ ನಂತರ ಎಲ್ಲ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್​ ಇಸ್ಲಾಮ್​ ಟ್ವೀಟ್ ಮಾಡಿದ್ದಾರೆ. ದೇವರು ನಮ್ಮನ್ನು ರಕ್ಷಿಸಿದ್ದಾನೆ ಎಂದು ಆಟಗಾರರು ಟ್ವೀಟ್​ ಮಾಡಿಕೊಂಡಿದ್ದಾರೆ.

ಮಸೀದಿ ಸಮೀಪ 6 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸ್ಥಳದಲ್ಲಿ ನಾಲ್ಕೈದು ಹೆಣಗಳು ಕಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಇದೊಂದು ಭಯೋತ್ಪಾದನಾ ದಾಳಿ ಎನ್ನಲಾಗಿದೆ. ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಆತ ಇನ್ನೂ ಜೀವಂತವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ ಮತ್ತೊಂದು ದಾಳಿ ನಡೆದಿದೆ.

ಸದ್ಯ ಪೊಲೀಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ಇನ್ನು, ಶೂಟೌಟ್​ ವೇಳೆ ಸಾಕಷ್ಟು ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ದಾಳಿಗೆ ಸಾಕಷ್ಟು ಮಂದಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಪ್ರತ್ಯಕ್ಷದರ್ಶಿಗಳು ದಾಳಿವೇಳೆ ಸಾಕಷ್ಟು ಜನರು ಸತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. “ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೋರ್ವ ಗನ್​ ಹಿಡಿದುಕೊಂಡು ನಿಂತಿದ್ದ. ಸಾಕಷ್ಟು ಬಾರಿ ಗುಂಡಿನ ಮೊರೆತ ಕೇಳಿದೆ. ಸಾಕಷ್ಟು ಜನರು ಮೃತಪಟ್ಟ ಅನುಮಾನವಿದೆ,” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Comments are closed.