ಕ್ರೀಡೆ

ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ, ಸಚಿನ್ ಗಿಂತಲೂ ಕೊಹ್ಲಿ ಶ್ರೇಷ್ಠ ಆಟಗಾರ: ಮೈಕಲ್ ವಾನ್

Pinterest LinkedIn Tumblr

ಲಂಡನ್: ಆಧುನಿಕ ಕ್ರಿಕೆಟ್ ನ ದ್ರುವತಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗಿಂತಲೂ ಶ್ರೇಷ್ಠ ಆಟಗಾರರೇ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ಇಂತಹ ವಾದಕ್ಕೆ ಕಾರಣವಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರ ಟ್ವೀಟ್.. ನಿನ್ನೆ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ತಮ್ಮ ಏಕದಿನ ವೃತ್ತಿ ಜೀವನದ 41ನೇ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯವನ್ನು ಭಾರತ 32 ರನ್ ಗಳ ಅಂತರದಲ್ಲಿ ಕಳೆದುಕೊಂಡಿತಾದರೂ, ಕೊಹ್ಲಿ ಬ್ಯಾಟಿಂಗ್ ವೈಖರಿ ಮಾತ್ರ ಎಲ್ಲರ ಗಮನ ಸೆಳೆಯಿತು.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮೈಕಲ್ ವಾನ್, ದ ಗೋಟ್ ಈಸ್ ಅಟ್ ಅಗೈನ್ #ವಿರಾಟ್ (The Goat is at Again..) ಎಂದು ಟ್ವೀಟ್ ಮಾಡಿದ್ದಾರೆ. ವಾನ್ ಅವರ ಈ ಟ್ವೀಟ್ ಗೆ ತಲೆ ಕೆಡಿಸಿಕೊಂಡ ಅಭಿಮಾನಿಗಳು ಅವರ ಟ್ವೀಟ್ ಗೆ ಪ್ರಶ್ನೆಗಳ ಸುರಿಮಳೆ ಗರೆದಿದ್ದಾರೆ. ಈ ಪೈಕಿ ಓರ್ವ ಅಭಿಮಾನಿ.. ನೀವು ವಿರಾಟ್ ಕೊಹ್ಲಿಯನ್ನು ಗೋಟ್ (ಮೇಕೆ) ಎಂದು ಕರೆದಿದ್ದೀರಿ.. ಕೊಹ್ಲಿ.. ಲಾರಾ, ಸಚಿನ್, ಬ್ರಾಡ್ಮನ್ ಗಿಂತಲೂ ಶ್ರೇಷ್ಠ ಆಟಗಾರರೇ..! ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ವಾನ್, ಹೌದು.. ಕೊಹ್ಲಿ ಏಕದಿನ ಕ್ರಿಕೆಟ್ ಶ್ರೇಷ್ಠ ಆಟಗಾರ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕೇವಲ 95 ಎಸೆತಗಳಲ್ಲಿ 123 ರನ್ ಸಿಡಿಸಿದ್ದರು. ಅಲ್ಲದೆ ಇದು ಅವರ ಏಕದಿನ ಕ್ರಿಕೆಟ್ ವೃತ್ತಿ ಜೀವನದ 41 ಶತಕ ಕೂಡ ಆಗಿತ್ತು. ಅಂತೆಯೇ ಕ್ಯಾಪ್ಟನ್ ಕೊಹ್ಲಿ ನಾಯಕರಾಗಿ ಅತಿವೇಗವಾಗಿ 4000 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

Comments are closed.