ಕ್ರೀಡೆ

ಪಂದ್ಯ ಸೋತರೂ ABD ದಾಖಲೆ ಮುರಿದ ಕೊಹ್ಲಿ!

Pinterest LinkedIn Tumblr


ರಾಂಚಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. 95 ಎಸೆತದಲ್ಲಿ 123 ರನ್ ಸಿಡಿಸಿದ ಕೊಹ್ಲಿ ಇದೀಗ ಸೌತ್ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ದಾಖಲೆ ಪುಡಿ ಮಾಡಿದ್ದಾರೆ. ರಾಂಚಿ ಪಂದ್ಯದಲ್ಲಿ ಭಾರತ ಮುಗ್ಗರಿಸಿದರೂ ಕೊಹ್ಲಿ ದಾಖಲೆ ಬರೆದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 4000 ರನ್ ಪೂರೈಸಿದ ವಿಶ್ವದ ನಾಯಕ ಅನ್ನೋ ದಾಖಲೆ ಈಗ ವಿರಾಟ್ ಕೊಹ್ಲಿ ಪಾಲಾಗಿದೆ. ಕೊಹ್ಲಿ ಕೇವಲ 63 ಇನ್ನಿಂಗ್ಸ್‌ಗಳಲ್ಲಿ ನಾಯಕನಾಗಿ 4000 ರನ್ ಪೂರೈಸಿದ್ದಾರೆ. ಇದಕ್ಕೂ ಮೊದಲು ಎಬಿ ಡಿವಿಲಿಯರ್ಸ್ 77 ಇನ್ನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದ್ದರು.

ರಾಂಚಿ ಪಂದ್ಯದಲ್ಲಿ 41ನೇ ಏಕದಿನ ಶತಕ ಸಿಡಿಸೋ ಮೂಲಕ ವಿರಾಟ್ ಕೊಹ್ಲಿ 225 ಏಕದಿನ ಪಂದ್ಯಗಳಲ್ಲಿ ಗರಿಷ್ಠ ಶತಕ ಸಿಡಿಸಿ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. 225 ಏಕದಿನ ಪಂದ್ಯಗಳ ಬಳಿಕ ಕೊಹ್ಲಿ ಶತಕದ ಸಂಖ್ಯೆ 41, ಸೌತ್ಆಫ್ರಿಕಾದ ಹಾಶಿಮ್ ಆಮ್ಲಾ 27 ಸೆಂಚುರಿ ಸಿಡಿಸಿದ್ದರು. ಎಬಿ ಡಿವಿಯರ್ಸ್ 25 ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 23 ಸೆಂಚುರಿ ಭಾರಿಸಿದ್ದರು.

ನಾಯಕನಾಗಿ ಗರಿಷ್ಠ ರನ್ ಸಿಡಿಸಿದ ಭಾರತೀಯರ ಪೈಕ್ ಎಂ.ಎಸ್.ಧೋನಿ(6641 ರನ್), ಮೊಹಮ್ಮದ್ ಅಜರುದ್ದೀನ್(5239 ರನ್), ಸೌರವ್ ಗಂಗೂಲಿ(5104 ರನ್) ಸಿಡಿಸಿದ್ದಾರೆ.

Comments are closed.