ರೋಚಕತೆಯಿಂದ ಕೂಡಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಕೊನೆಗೂ ಕೊಹ್ಲಿ ಪಡೆಯ ಪಾಲಾಗಿದೆ. 8 ರನ್ಗಳಿಂದ ಗೆದ್ದು ಬೀಗಿದ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇಡೀ ಪಂದ್ಯದ ಪ್ರಮುಖ ಹೈಲೈಟ್ಸ್ ಎಂದರೆ ವಿರಾಟ್ ಕೊಹ್ಲಿ ಶತಕ ಹಾಗೂ ವಿಜಯ್ ಶಂಕರ್ರ ಕೊನೆಯ ಓವರ್.
ಅದರಲ್ಲು ಆಸ್ಟ್ರೇಲಿಯಾಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 11 ರನ್ ಬೇಕಿದ್ದಾಗ ಬೌಲಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ವಿಜಯ್ ಶಂಕರ್ ಹೀರೋ ಆಗಿ ಬಿಟ್ಟರು. ವಿಜಯ್ ಶಂಕರ್ ಇಡೀ ಪಂದ್ಯದಲ್ಲಿ ಮಾಡಿದ್ದು ಕೇವಲ 1.3 ಓವರ್ಗಳನ್ನಷ್ಟೆ. 50ನೇ ಓವರ್ಗೂ ಮುನ್ನ 10ನೇ ಓವರ್ ಬೌಲಿಂಗ್ ಮಾಡಿದ್ದ ಶಂಕರ್, ತನ್ನ ಮೊದಲ ಓವರ್ನಲ್ಲೇ 13 ರನ್ ನೀಡಿದ್ದರು. ಹೀಗಾಗಿ ನಂತರದರಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಕೊನೆಯ ಪ್ರಮುಖ ಓವರ್ ಶಂಕರ್ಗೆ ನೀಡಿದ್ದು ಅಚ್ಚರಿಕೆ ಕಾರಣವಾಯಿತು. ಆದರೆ, ಕೊನೆಯ ಓವರ್ ಶಂಕರ್ ಬೌಲಿಂಗ್ ಮಾಡಬೇಕು ಎಂಬುದು ನನ್ನ ನಿರ್ಧಾರವಾಗಿರಲಿಲ್ಲ ಎಂದು ಸ್ವತಃ ಕೊಹ್ಲಿ ಹೇಳಿದ್ದಾರೆ.
ನಾನು 46ನೇ ಓವರ್ ಶಂಕರ್ ಅಥವಾ ಕೇದರ್ ಜಾಧವ್ಗೆ ನೀಡುವ ಅಂದಾಜಿನಲ್ಲಿದ್ದೆ. ಆದರೆ, ಈ ಸಂದರ್ಭ ಧೋನಿ ಅವರು ಮೊಹಮ್ಮದ್ ಶಮಿ ಅಥವಾ ಜಸ್ಪ್ರೀತ್ ಬುಮ್ರಾ ಈಗ ಬೌಲೀಂಗ್ ಮಾಡಲಿ. ಇವರ ಓವರ್ಗಳಲ್ಲಿ ವಿಕೆಟ್ ಉರುಳಿದರೆ ಖಂಡಿತಾಗಿಯು ಗೆಲುವು ನಮ್ಮ ಕೈಹಿಡಯಲಿದೆ ಎಂದರು. ಅದರಂತೆ ಬುಮ್ರಾ 2 ವಿಕೆಟ್ ಕಿತ್ತು ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಅಂತೆಯೆ ಇನ್ನೂ 1 ಓವರ್ ಬಾಕಿ ಇರುವಂತೆ ಅವರಿಬ್ಬರೂ ಓವರ್ ಕೂಡ ಮುಕ್ತಾಯವಾಗಿತ್ತು. ಹೀಗಾಗಿ ಕೊನೆಯ ಓವರ್ ಯಾರಿಗೆ ನೀಡವುದು ಎಂಬ ಗೊಂದಲ ಶುರುವಾಯಿತು. ಆಗ ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ವಿಜಯ್ ಶಂಕರ್ಗೆ ಬೌಲಿಂಗ್ ನೀಡುವಂತೆ ಸಲಹೆ ನೀಡಿದರು. ಹೀಗಾಗಿ ಶಂಕರ್ಗೆ 50ನೇ ಓವರ್ ಬೌಲಿಂಗ್ ಮಾಡಲು ಹೇಳಿದೆ. ಶಂಕರ್ ನಾವಿಟ್ಟ ನಂಬಿಕೆಯನ್ನು ಉಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು ಎಂದು ಕೊಹ್ಲಿ ಹೇಳಿದ್ದಾರೆ.
Comments are closed.