ಕ್ರೀಡೆ

ಪುಲ್ವಾಮಾ ಭಯೋತ್ಪಾದನಾ ದಾಳಿ ಖಂಡಿಸಿದ ಟೀಂ ಇಂಡಿಯಾ ಆಟಗಾರ ಕೊಹ್ಲಿ, ಸೆಹ್ವಾಗ್, ಲಕ್ಷ್ಮಣ್, ಗಂಭೀರ್

Pinterest LinkedIn Tumblr

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯಾನಕ ಉಗ್ರ ದಾಳಿಗೆ ಟೀಂ ಇಂಡಿಯಾ ಆಟಗಾರರು ಖಂಡಿಸಿದ್ದಾರೆ.

ಭದ್ರತಾ ಪಡೆಗಳ ಮೇಲಿನ ದಾಳಿಯನ್ನು ಭಾರತ ಕ್ರಿಕೆಟಿಗರು ಖಂಡಿಸಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಇನ್ನೂ ಮೊದಲಾದವರು ತಮ್ಮ ಟ್ವೀಟ್ ನಲ್ಲಿ ನೋವು ಮತ್ತು ದುಃಖವನ್ನು ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕನಿಷ್ಠ 40 ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು.ಜೈಶ್-ಎ-ಮೊಹಮ್ಮದ್ ಸಂಘಟನೆ ಈ ಕೃತ್ಯ ನಡೆಸಿದೆ.

2001ರ ಕಾಶ್ಮೀರ ಶಾಸನ ಸಭೆ ಮೇಲಿನ ಆತ್ಮಾಹುತಿ ಕಾರ್ ಬಾಂಬ್ ದಾಳಿಯನ್ನು ಹೊರತುಪಡಿಸಿದರೆ ಜಮ್ಮು ಕಾಶ್ಮೀರದಲ್ಲಿ ನಡೆದ ಮೊದಲ ಆತ್ಮಾಹುತಿ ದಾಳಿ ಇದಾಗಿದೆ.

Comments are closed.