ಕ್ರೀಡೆ

ನಮ್ಮ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅಗತ್ಯವಿದೆ: ಶಿಖರ್ ಧವನ್

Pinterest LinkedIn Tumblr

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ 3ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಅನಿವಾರ್ಯತೆ ಇದೆ ಎಂದು ಮತ್ತೋರ್ವ ಆಟಗಾರ ಶಿಖರ್ ಧವನ್ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಆಂಗ್ಲ ಮಾಧ್ಯಮವೊಂದರೊಂದಿಗೆ ಮಾತನಾಡಿರುವ ಧವನ್, ಸಮತೋಲಿತ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಉಪಸ್ಥಿತಿ ಪ್ರಮುಖವಾಗಲಿದೆ. ಕೇದಾರ್ ಜಾದವ್ ಉತ್ತಮ ಆಲ್ ರೌಂಡ್ ಆಟದ ಪ್ರದರ್ಶನದ ಹೊರತಾಗಿಯೂ ಪಾಂಡ್ಯ ನಮ್ಮ ತಂಡದ ‘ಗೋಲ್ಡನ್ ಆರ್ಮ್’ ಇದ್ದಂತೆ. ಪಾಂಡ್ಯ ಉಪಸ್ಥಿತಿ ನಮಗೆ ಖಂಡಿತಾ ಉಪಯೋಗಕವಾಗುತ್ತದೆ. ಪಾಂಡ್ಯ ಪಡೆಯುವ ವಿಕೆಟ್ ಗಳು ಮತ್ತು ಬ್ಯಾಟಿಂಗ್ ನಲ್ಲಿ ಗಳಿಸುವ ರನ್ ಗಳು ತಂಡಕ್ಕೆ ಸಕಾರಾತ್ಮಕವಾಗಿರುತ್ತದೆ. ಟೆಸ್ಟ್ ಮತ್ತು ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಪಾಂಡ್ಯ ಓರ್ವ ಉತ್ತಮ ಆಟಗಾರ ಎಂದು ಧವನ್ ಹೇಳಿದ್ದಾರೆ.

ಇನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿದ್ದ ಹಾರ್ದಿಕ್ ಪಾಂಡ್ಯಾ ಹಾಗೂ ಕೆಎಲ್ ರಾಹುಲ್ ರನ್ನು ಹಾಲಿ ಆಸಿಸ್ ಪ್ರವಾಸ ಮತ್ತು ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದ ಕೈಬಿಡಲಾಗಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ಎಲ್ಲ ಮೂರೂ ಮಾದರಿಯ ಕ್ರಿಕೆಟ್ ನಲ್ಲೂ ತಮ್ಮ ಛಾಪು ಮೂಡಿಸಿದ್ದರು. ಈ ವರೆಗೂ 11 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಂಡ್ಯ 42 ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 30ರ ಸರಾಸರಿಯಲ್ಲಿ ಪಾಂಡ್ಯ ಬ್ಯಾಟ್ ಬೀಸಿದ್ದು, 17 ವಿಕೆಟ್ ಕಬಳಿಸಿದ್ದಾರೆ.

2018ರ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಕೊನೆಯ ಬಾರಿಗೆ ಪಾಂಡ್ಯ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ದೂರ ಉಳಿದಿದ್ದರು. ಆಸಿಸ್ ಪ್ರವಾಸದಲ್ಲಿ ಪಾಂಡ್ಯ ತಂಡ ಸೇರಿಕೊಳ್ಳಲ್ಲಿದ್ದಾರೆ ಎನ್ನುವಾಗಲೇ ಕಾಫಿ ವಿತ್ ಕರಣ್ ಕಾರ್ಯಕ್ರಮದ ವಿವಾದದ ಮೂಲಕ ಮತ್ತೆ ತಂಡದಿಂದ ದೂರಾದರು.

Comments are closed.