ಕ್ರೀಡೆ

ಮತ್ತೂ ರೈನಾಗೆ ಸಿಗದ ಅವಕಾಶ: ಆಯ್ಕೆ ಸಮಿತಿ ವಿರುದ್ಧ ಟ್ಟಿಟ್ಟಿಗರ ಆಕ್ರೋಶ

Pinterest LinkedIn Tumblr


ಮುಂಬೈ: ಕಳೆದೆರಡು ವರ್ಷಗಳ ಹಿಂದೆ ಟೀಂ ಇಂಡಿಯಾದ ಪವರ್​ ಹಿಟ್ಟರ್​, ಮ್ಯಾಚ್​ ಫಿನಿಶರ್ ಎಂಬ ಪಟ್ಟ ಕಟ್ಟಿಕೊಂಡು ತಂಡದ ಖಾಯಂ ಸದಸ್ಯನಾಗಿದ್ದ ಸುರೇಶ್ ರೈನಾ ಸದ್ಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದು, ಅವರನ್ನ ಆಯ್ಕೆ ಮಾಡಲು ಆಯ್ಕೆ ಸಮಿತಿ ಸಹ ಹಿಂದೇಟು ಹಾಕುತ್ತಿದೆ.

ವೆಸ್ಟ್​ ಇಂಡೀಸ್​, ಆಸ್ಟ್ರೇಲಿಯಾ ಹಾಗೂ ಇದೀಗ ನ್ಯೂಜಿಲ್ಯಾಂಡ್​​ ವಿರುದ್ಧದ ಟಿ-20 ಸರಣಿಯಲ್ಲೂ ಅವರನ್ನ ಪರಿಗಣನೆಗೆ ತೆಗೆದುಕೊಳ್ಳದ ಕಾರಣಕ್ಕಾಗಿ ಟ್ವೀಟರ್​ನಲ್ಲಿ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದಿನ ವರ್ಷ ಇಂಗ್ಲೆಂಡ್​​ನಲ್ಲಿ ನಡೆಯಲಿರುವ ವಿಶ್ವಕಪ್​ ದೃಷ್ಟಿಯಿಂದ ಇದೀಗ ತಂಡಕ್ಕೆ ಆಯ್ಕೆಗೊಳ್ಳುತ್ತಿರುವ ಆಟಗಾರರ ಪ್ರದರ್ಶನ ಮಹತ್ವ ಪಡೆದುಕೊಳ್ಳುವ ಕಾರಣ ರೈನಾಗೆ ಚಾನ್ಸ್​ ನೀಡುತ್ತಿಲ್ಲ ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಸೈಯದ್​ ಮುಸ್ತಾಕ್​ ಅಲಿ ಟ್ರೋಫಿಯಲ್ಲಿ ಶತಕ ಸಿಡಿಸಿದ್ರೂ ಅವರಿಗೆ ಚಾನ್ಸ್ ನೀಡದಿರಲು ಕಾರಣ ಏನು ಎಂಬ ಪ್ರಶ್ನೆಯನ್ನ ಕ್ರೀಡಾಭಿಮಾನಿಗಳು ಪ್ರಶ್ನಿಸಿದ್ದು, ಅವರ ಕ್ರಿಕೆಟ್​ ವೃತ್ತಿ ಬದುಕು ಸಂಪೂರ್ಣವಾಗಿ ಮುಗಿದು ಹೋಯ್ತಾ ಎಂದು ಕೇಳಿದ್ದಾರೆ. ಈಗಾಗಲೇ ಈ ಹಿಂದೆ ಅನೇಕ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಹಾಗೂ ಮೈದಾನದಲ್ಲಿ ಚುರುಕಾಗಿ ಫಿಲ್ಡಿಂಗ್ ಮಾಡುವ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ನೆಟಿಜನ್ಸ್​ ಕೇಳಿಕೊಂಡಿದ್ದಾರೆ.

ಇದೇ ವರ್ಷ ಇಂಗ್ಲೆಂಡ್​ ವಿರುದ್ಧದ ಟಿ-20 ಸರಣಿಯಲ್ಲಿ ರೈನಾ ಆಯ್ಕೆಗೊಂಡಿದ್ದರು. ಅದಾದ ಬಳಿಕ ಮತ್ತೆ ಆಯ್ಕೆ ಸಮಿತಿ ಕೆಂಗಣ್ಣಿಗೆ ಅವರು ಗುರಿಯಾಗಿದ್ದಾರೆ.

Comments are closed.