ಕ್ರೀಡೆ

ಆ ‘ಲಕ್ಕಿ ಚಡ್ಡಿ’ ಹರಿದು ಹೋಗದಿದ್ದರೆ ನಾನು ಇನ್ನು ಹೆಚ್ಚು ವಿಕೆಟ್ ಪಡೆಯುತ್ತಿದ್ದೆ: ಹರ್ಭಜನ್

Pinterest LinkedIn Tumblr


ಟೀಂ ಇಂಡಿಯಾದ ಹಿರಿಯ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಆಕ್ರಮಣಕಾರಿ ಬೌಲಿಂಗ್ ದಾಳಿಯ ಮೂಲಕ ಎದುರಾಳಿಗಳ ನಿದ್ದೆಗೆಡಿಸಿದ್ದರು. ಸದ್ಯ ಕ್ರಿಕೆಟ್ ನಿಂದ ದೂರ ಉಳಿದಿರುವ ಅವರು ಟಿವಿ ಶೋಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.
ಇನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹರ್ಭಜನ್ ಸಿಂಗ್ ಅವರು ತಮ್ಮ ಸಕ್ಸಸ್ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಸಕ್ಸಸ್ ಗೆ ನನ್ನ ಲಕ್ಕಿ ಅಂಡರ್ ವೇರ್ ಕಾರಣ ಎಂದು ಹೇಳಿದ್ದಾರೆ. ನನ್ನ ಬಳಿ ಲಕ್ಕಿ ಅಂಡರ್ ವೇರ್ ಒಂದಿತ್ತು. ಅದನ್ನು ಧರಿಸಿ ಆಡಿದಾಗಲೆಲ್ಲಾ ಒಳ್ಳೆಯ ಪ್ರದರ್ಶನ ನೀಡುತ್ತಿದ್ದೆ. ಅಲ್ಲದೆ ಆ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಗಳನ್ನು ಪಡೆಯುತ್ತಿದ್ದೆ. ಆದರೆ ಸತತವಾಗಿ ಉಪಯೋಗಿಸಿದ್ದರಿಂದ ಆ ಚಡ್ಡಿ ಹರಿದುಹೋಗಿತ್ತು. ಇಲ್ಲದಿದ್ದರೆ ನಾನು ಇನ್ನಷ್ಟು ವಿಕೆಟ್ ಗಳನ್ನು ಪಡೆಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಹರ್ಭಜನ್ ಸಿಂಗ್ 417 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 236 ಏಕದಿನ ಪಂದ್ಯದಲ್ಲಿ 269 ವಿಕೆಟ್ ಪಡೆದಿದ್ದಾರೆ.

Comments are closed.