ರಾಷ್ಟ್ರೀಯ

ಬಸ್​ನಲ್ಲಿ ಯುವತಿ ಎದುರೇ ಹಸ್ತಮೈಥುನ: ಬಂಧನ

Pinterest LinkedIn Tumblr


ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎದುರು ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಈಗ ದೆಹಲಿ ಸಾರಿಗೆ ಬಸ್​​ನಲ್ಲಿ ಸಂಚರಿಸುತ್ತಿದ್ದ ಯುವತಿಗೂ ಕೂಡ ಇಂಥದ್ದೇ ಕಹಿ ಅನುಭವವಾಗಿದೆ.

22 ವರ್ಷದ ಯುವತಿಯೊಬ್ಬಳು ದೆಹಲಿಯ ಕಪಾಶೇರಾದಲ್ಲಿ ನಗರ ಸಾರಿಗೆ ಬಸ್​ನಲ್ಲಿ ಸಂಚಾರ ಮಾಡುತ್ತಿದ್ದಳು. ಅವಳ ಪಕ್ಕದಲ್ಲಿ 45 ವರ್ಷದ ಕಿಶನ್​ ದತ್​ ಪಾಂಡೆ ಎಂಬಾತ ಕುಳಿತಿದ್ದ. ಬಸ್​ ಸಂಚಾರ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಆತ ತನ್ನ ಪ್ಯಾಂಟ್​ನ ಜಿಪ್​ ತೆಗೆದ. ಈ ವೇಳೆ ಯುವತಿಗೆ ಭಯ ಉಂಟಾಗಿತ್ತು.

ನಂತರ ಗುಪ್ತಾಂಗವನ್ನು ಹೊರತೆಗೆದ ಕಿಶನ್​ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದ. ಈ ವೇಳೆ ಆಕೆ ಕಿರುಚಾಡಲು ಆರಂಭಿಸಿದ್ದಳು. ಅಲ್ಲದೆ, ಪ್ರಯಾಣಿಕರ ಬಳಿ ಆತನಿಂದ ರಕ್ಷಿಸುವಂತೆ ಕೋರಿಕೊಂಡಿದ್ದಾಳೆ. ತಕ್ಷಣಕ್ಕೆ ಸಹ ಪ್ರಯಾಣಿಕರು ಪೊಲೀಸರಿಗೆ ದೂರವಾಣಿ ಕರೆ ಮಾಡಿದ್ದಾರೆ.

ಪೊಲೀಸರಿಗೆ ದೂರವಾಣಿ ಕರೆ ಹೋದ ತಕ್ಷಣ ಎಚ್ಚೆತ್ತ ಕಿಶನ್​, ಬಸ್​ನಿಂದ ಜಿಗಿದು ಓಡಲು ಪ್ರಯತ್ನಿಸಿದ್ದ. ಆದರೆ ಬಸ್​ನಲ್ಲಿ ಪ್ರಯಾಣಿಕರು ಹೆಚ್ಚಿದ್ದರಿಂದ ಆತನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ನವೆಂಬರ್​ ತಿಂಗಳಲ್ಲೂ ದೆಹಲಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಸಾರಿಗೆ ಬಸ್​ನಲ್ಲಿ ಸಂಚರಿಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎದುರು ಬಂದಿದ್ದ ಯುವಕನೋರ್ವ ಹಸ್ತ ಮೈಥುನ ಮಾಡಿಕೊಂಡಿದ್ದ. ನಂತರ ಆತನನ್ನು ಬಂಧಿಸಲಾಗಿತ್ತು.

Comments are closed.