ಕ್ರೀಡೆ

6 ವರ್ಷದ ಬಾಲಕನನ್ನು ತಂಡಕ್ಕೆ ಸೇರಿಸಿಕೊಂಡ ಆಸ್ಟ್ರೇಲಿಯಾ ! ಕೊಹ್ಲಿಗೆ ಆತ ಕೊಟ್ಟ ಎಚ್ಚರಿಕೆ ಏನು ಗೊತ್ತೆ?

Pinterest LinkedIn Tumblr

ಅಡಿಲೇಡ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯಾ 12 ಆಟಗಾರರ ಪಂದ್ಯವನ್ನು ಘೋಷಿಸಿತ್ತು. ಅದರಲ್ಲಿ 6 ವರ್ಷದ ಬಾಲಕನನ್ನು ಆಯ್ಕೆ ಮಾಡಿದ್ದು ಇದು ಅಚ್ಚರಿಕೆ ಕಾರಣವಾಗಿತ್ತು.

ಆಸ್ಟ್ರೇಲಿಯಾ ಆರು ವರ್ಷದ ಬಾಲಕ ಸ್ಪಿನ್ನರ್ ಆರ್ಚೀ ಷಿಲ್ಲರ್ ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಆರ್ಚೀ ನಾಯಕ ವಿರಾಟ್ ಕೊಹ್ಲಿಗೆ ವಿಕೆಟ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಆರ್ಚೀ ಷಿಲ್ಲರ್ ಎಂಬ ಆರು ವರ್ಷದ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿರುವ ಕಾರಣ ಆಸ್ಟ್ರೇಲಿಯಾ ತಂಡದಲ್ಲಿ ಆತನಿಗೆ ಅವಕಾಶ ನೀಡಿದೆ.

ಆರ್ಚೀ ಷಿಲ್ಲರ್ ಕ್ರೀಡಾಭಿಮಾನಿಯಾಗಿದ್ದು ಕಾಯಿಲೆಯಿಂದ ಬಳಲುತ್ತಿರುವ ಕಾರಣ ಆತ ಅನೇಕ ವರ್ಷಗಳನ್ನು ಆಸ್ಪತ್ರೆಯ ಬೆಡ್ ಮೇಲೆ ಕಳೆದಿದ್ದಾನೆ. ಇದೀಗ ಆತ ಎಲ್ಲರಂತೆ ಖುಷಿ ಖುಷಿಯಿಂದ ಇರಲಿ ಎನ್ನುವ ಸಲುವಾಗಿ ಆತನಿಗೆ ಅವಕಾಶ ನೀಡಲಾಗಿದೆ.

Comments are closed.