ಮನೋರಂಜನೆ

ಪ್ರಿಯಾಂಕಾ-ನಿಕ್ ವಿವಾಹ: ಭಾವನ ಶೂ ಕದ್ದ ಪರಿಣೀತಿ ಇಟ್ಟಿದ್ದು ಬರೋಬರಿ 37 ಕೋಟಿಗೆ ಡಿಮ್ಯಾಂಡ್! ಸಿಕ್ಕಿದ್ದೆಷ್ಟು ?

Pinterest LinkedIn Tumblr

ಮುಂಬೈ: ಬಾಲಿವುಡ್ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ಇದೀಗ ವಿವಾಹ ಸಂಭ್ರಮಾಚರಣೆಯಲ್ಲಿದ್ದು ಇವರಿಬ್ಬರೂ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಈ ವೇಳೆ ಹಿಂದೂ ಸಂಪ್ರದಾಯದಂತೆ ಮದುವೆ ಮನೆಯಲ್ಲಿ ಪ್ರಿಯಾಂಕಾ ಸೋದರಿ ಪರಿಣೀತಿ ಚೋಪ್ರಾ ಭಾವ ನಿಕ್ ಶೂ ಗಳನ್ನು ಕದ್ದು ಮುಚ್ಚಿಟ್ಟಿದ್ದು ಬರೋಬ್ಬರಿ 37 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದರು!

ಮದುವೆ ಸಂಭ್ರದಲ್ಲಿದ್ದ ನಿಕ್ ಗೆ ಶೂ ಕಾಣೆಯಾಗಿರುವುದು ತಿಳಿಯುತ್ತಲೇ ಆತ ಪರಿಣೀತಿ ಬಳಿ ಆಗಮಿಸಿ ಕೇಳಿದ್ದಾರೆ. ಆಗ ಪರಿಣೀತಿ ಶೂ ಬೇಕೆಂದರೆ 5 ಮಿಲಿಯನ್ ಅಮೆರಿಕನ್ ಡಾಲರ್ (37 ಕೋಟಿ ರು.) ನೀಡಬೇಕೆಂದು ಒತ್ತಾಯಿಸಿದ್ದಾರೆ.

ಭಾರತೀಯ ಪರಂಪರೆಯ ವಿವಾಹಗಳಲ್ಲಿ ವಧುವಿನ ಸೋದರಿಯರು ಭಾವನ ಶೂ ಅಥವಾ ಇನ್ನಾವುದೇ ವಸ್ತುಗಳನ್ನು ಮುಚ್ಚಿಟ್ಟು ಹಣ ಪಡೆಯುವ ಪದ್ದತಿ ಇದೆ. ಇದರಂತೆ ಪರಿಣೀತಿ ಚೋಪ್ರಾ ಸಹ ತನ್ನ ಭಾವ ನಿಕ್ ಗೆ ಭಾರೀ ಮೊತ್ತದ ಹಣದ ಬೇಡಿಕೆ ಇಟ್ಟಿದ್ದರು.

ಕಡೆಗೊಮ್ಮೆ ನಿಕ್ ಸ್ನೇಹಿತರೆಲ್ಲಾ ಸೇರಿ 5 ಲಕ್ಷ ರೂ. ನೀಡಲು ತಯಾರಾದಾಗ ಪರಿಣೀತಿ ತಾವು ಅಡಗಿಸಿಟ್ಟಿ ಶೂ ಹಿಂತಿರುಗಿಸಿದ್ದಾರೆ.

ಬಹುದಿನದ ಗೆಳೆಯ ನಿಕ್ ಜೋನ್ಸ್ ಅವರನ್ನು ಪ್ರಿಯಾಂಕಾ ಚೋಪ್ರಾ ಡಿಸೆಂಬರ್ 2 ಮತ್ತು 3ರಂದು ಜೋಧ್‍ಪುರದ ಉಮೈದ್ ಭವನದಲ್ಲಿ ವಿವಾಹವಾಗಿದ್ದರು.ಈ ವಿವಾಹಕ್ಕೆ ನಿಕ್ ಹಾಗೂ ಪ್ರಿಯಾಂಕಾ ಕುಟುಂಬಸ್ಥರಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ವಿವಾಹದ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಪಾಲ್ಗೊಂಡಿದ್ದು ವಧೂವರರೈಗೆ ಶುಭ ಹಾರೈಸಿದ್ದಾರೆ.

ಭಾರತೀಯ ಸಂಪ್ರದಾಯದಂತೆ ನಡೆದ ಈ ವಿವಾಹ ಸಮಾರಂಭದಲ್ಲಿ ಅಮೆರಿಕಾ ಮೂಲದ ನಿಕ್ ಕುಟುಂಬಿಕರು ಬಹಳವೇ ಸಂಭ್ರಮ, ಉಲ್ಲಾಸದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Comments are closed.