ಕ್ರೀಡೆ

ಕೆಎಲ್ ರಾಹುಲ್ ವಿರುದ್ಧ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಆಕ್ರೋಶಗೊಂಡದ್ದೇಕೆ..?

Pinterest LinkedIn Tumblr

ಸಿಡ್ನಿ: ಟೀಂ ಇಂಡಿಯಾ ಮಹಿಳಾ ತಂಡದಲ್ಲಿನ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಅಂತಹುದೇ ಪರಿಸ್ಥಿತಿ ಇದೀಗ ಪುರುಷರ ತಂಡದಲ್ಲೂ ಕಾಣಿಸಿಕೊಂಡಿದೆಯೇ ಎಂಬ ಅಭಿಪ್ರಾಯ ಮೂಡುತ್ತಿದೆ.

ಇದಕ್ಕೆ ಇಂಬು ನೀಡುವಂತೆ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ಕೆಎಲ್ ರಾಹುಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಆಟಗಾರರು, ಆಸ್ಟ್ರೇಲಿಯಾ ಎಲೆವನ್ ವಿರುದ್ದ ಅಭ್ಯಾಸ ಪಂದ್ಯವನ್ನಾಡುತ್ತಿದ್ದಾರೆ.

4 ದಿನಗಳ ಈ ಪಂದ್ಯದ ಮೊದಲ ದಿನದಾಟದ ವೇಳೆ ಕೆಎಲ್ ರಾಹುಲ್ ಔಟ್ ಆದ ಪರಿಗೆ ಸಂಜಯ್ ಬಂಗಾರ್ ತೀವ್ರ ಅಸಮಾಧಾನ ಗೊಂಡಿದ್ದಾರೆ. ದಿನದಾಟದ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಂಗಾರ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ‘ಕೆಎಸ್ ರಾಹುಲ್ ಔಟ್ ಆಗಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಹುಲ್‌ ಔಟ್‌ ಆಗಲು ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಅನವಶ್ಯಕವಾಗಿ ಆಫ್ ಸ್ಟಂಪ್‌ನಿಂದ ಆಚೆ ಹೋಗುವ ಎಸೆತಗಳನ್ನು ಕೆಣಕಿ ವಿಕೆಟ್‌ ಕೈ ಚೆಲ್ಲುತ್ತಿದ್ದಾರೆ. ಆದರೆ ಕೇವಲ ಒಂದೇ ಒಂದು ದೊಡ್ಡ ಇನ್ನಿಂಗ್ಸ್‌ ಅವರು ಆತ್ಮವಿಶ್ವಾಸ ಮರಳಿ ಪಡೆಯುವಂತೆ ಮಾಡಲಿದೆ. ಆ ದಿನವನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು. ಅಂತೆಯೇ ರಾಹುಲ್ ಟೀಂ ಇಂಡಿಯಾದ ಆರಂಭಿಕ ಆಟಗಾರ ಸ್ಥಾನಕ್ಕೆ ಉತ್ತಮ ಸ್ಪರ್ಧಿ ಎಂದು ಹೇಳಿದ ಬಂಗಾರ್ ರಾಹುಲ್ ತಮ್ಮ ಆಟದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನು ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಪೃಥ್ವಿ ಶಾ ಸೇರಿದಂತೆ ಭಾರತದ ಐವರು ಬ್ಯಾಟ್ಸಮನ್ ಗಳು ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ರಾಹುಲ್ ಮಾತ್ರ ಅದೇ ಚಾಳಿಯನ್ನೇ ಮುಂದುವರೆಸಿ ಕೇವಲ 3 ರನ್ ಗೆ ವಿಕೆಟ್ ಕೈ ಚೆಲ್ಲಿದರು.

Comments are closed.