ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಈ ಮಧ್ಯೆ ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ವೇಗವಾಗಿ ಓಡಿಯುವ ವಿಡಿಯೋವೊಂದು ವೈರಲ್ ಆಗಿದೆ.
ಅಂಬಟ್ಟಿ ರಾಯುಡು 99 ರನ್ ಗಳಿಸಿದ್ದಾಗ ಪೌಲ್ ಎಸೆತದಲ್ಲಿ ಒಂದು ರನ್ ಬಾರಿಸಿ ಶತಕ ಪಡೆಯುವ ಉತ್ಸಾಹದಲ್ಲಿದ್ದರು. ಈ ವೇಳೆ ರಾಯುಡು ಕವರ್ಸ್ ನಲ್ಲಿ ಚೆಂಡನ್ನು ಬಾರಿಸಿದರು. ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿತ್ತು. ಅಷ್ಟರಲ್ಲಿ ಅಂಬಟ್ಟಿ ರಾಯುಡು ಒಂದು ರನ್ ಪಡೆಯಲು ಕ್ರೀಸ್ ಬಿಟ್ಟಿದ್ದರಿಂದ ನಾನ್ ಸ್ಟ್ರೈಕ್ ನಲ್ಲಿದ್ದ ಧೋನಿ ಔಟಾದರು ಪರವಾಗಿಲ್ಲ ಅಂತ ವೇಗವಾಗಿ ಓಡಿದರು.
ಆದರೆ ವೆಸ್ಟ್ ಇಂಡೀಸ್ ಆಟಗಾರ ಎಸೆದ ಚೆಂಡು ವಿಕೆಟ್ ಗೆ ಬಡಿಯಲಿಲ್ಲ. ಆದರೆ ಸಹ ಆಟಗಾರ ಶತಕಕ್ಕಾಗಿ ಔಟಾದರೂ ಪರವಾಗಿಲ್ಲ ಅಂತ ಧೋನಿ ಓಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.
ಕ್ರೀಡೆ
Comments are closed.