ಕ್ರೀಡೆ

ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸುವ ಮೂಲಕ ಸಾಧನೆ ಮೆರೆದ ವಿರಾಟ್

Pinterest LinkedIn Tumblr

ವಿಶಾಖಪಟ್ಟಣ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನೊಂದು ದಾಕಲೆ ನಿರ್ಮಿಸಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸಿದ್ದಾರೆ.

ಈ ಮೂಲಕ ಅವರು ಇಂತಹಾ ಸಾಧನೆ ಮಾಡಿದ ಭಾರತದ ಐದನೇ ಹಾಗೂ ವಿಶ್ವದ 13ನೇ ಆಟಗಾರ ಎನಿಸಿದ್ದಾರೆ.

ಅವರು 205 ಇನ್ನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗವಾಗಿ10,000 ರನ್ ಪೂರೈಸಿದ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ವಿಶೇಷವೆಂದರೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ 10,000 ರನ್ ಪೂರೈಸಲು 259 ಇನ್ನಿಂಗ್ಸ್ ತೆಗೆದುಕೊಂಡರೆ ವಿರಾಟ್ ಕೊಹ್ಲಿ 205 ಇನ್ನಿಂಗ್ಸ್ ನಲ್ಲಿಯೇ ಈ ಸಾಧನೆ ಮೆರೆದಿದ್ದಾರೆ.

ಭಾರತದ ಪರವಾಗಿ ಹತ್ತು ಸಾವಿರ ರನ್ ಗಳಿಸಿದ ಕ್ರಿಕೆಟಿಗರಲ್ಲಿ ಕೊಹ್ಲಿ ಐದನೆಯವರಾಗಿದ್ದು ಇದಕ್ಕೆ ಹಿಂದೆ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ(10123), ರಾಹುಲ್ ದ್ರಾವಿಡ್(10889) ಮತ್ತು ಸೌರವ್ ಗಂಗೂಲಿ(11363) ಈ ಸಾಧನೆ ಮಾಡಿದ್ದಾರೆ.

ಇನ್ನು ಏಷ್ಯಾ ಖಂಡದ ಆಟಗಾರರೇ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಏಷ್ಯಾ ಖಂಡದ ಹೊರಗೆ ಈ ಸಾಧನೆ ಮಾಡಿದವರೆಂದರೆ ರಿಕಿ ಪಾಂಟಿಂಗ್, ಜಾಕ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ ಮಾತ್ರವೇ ಆಗಿದ್ದಾರೆ.

Comments are closed.