ಕ್ರೀಡೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಲೋಕದ ಈ ಹಾಟ್ ಆ್ಯಂಕರ್​ ನಮ್ಮ ರಾಜ್ಯದ ಸೊಸೆ!

Pinterest LinkedIn Tumblr


ಟಿವಿ ನಿರೂಪಣೆ ಎಂಬುದು ಎಷ್ಟು ಆಸಕ್ತಿಯ ಕೆಲಸವೋ, ಅಷ್ಟೇ ಸವಾಲಿನ ಕೆಲಸ ಕೂಡ ಹೌದು. ಈ ಕ್ಷೇತ್ರದಲ್ಲಿ ಹೆಸರು ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಅದರಲ್ಲೂ ಕ್ರೀಡಾ ವಿಭಾಗದ ನಿರೂಪಣೆಯಲ್ಲಿ ಯಶಸ್ಸು ಸಾಧಿಸಿ ಮುಂಚೂಣಿಯಲ್ಲಿ ಕಾಣಿಸುವವರು ಮಯಾಂತಿ ಲ್ಯಾಂಗರ್​​.

ಕಾಲೇಜು ದಿನದಿಂದಲೇ ನಿರೂಪಣೆಯನ್ನು ಆರಂಭಿಸಿದ ಮಯಾಂತಿ ಅವರು, ನೋಡುನೋಡುತ್ತಿದಂತೆ, ಕ್ರೀಡಾ ನಿರೂಪಕಿಯಾಗಿ ಉತ್ತುಂಗಕ್ಕೇರಿಬಿಟ್ಟರು. ಸದ್ಯ ಖಾಸಗಿ ವಾಹಿಯೊಂದರ ಕ್ರೀಡಾ ನಿರೂಪಕಿಯಾಗಿರುವ ಮಯಾಂತಿ, ತಮ್ಮ ಆ್ಯಂಕರಿಂಗ್ ಶೈಲಿ ಹಾಗೂ ಹಾಟ್ ಲುಕ್​​ನ ಮೂಲಕ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ.

ಕೇವಲ ಒಂದು ಕ್ರೀಡೆಗಷ್ಟೇ ಸೀಮಿತವಾಗಿರದೇ 2010ರಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್​, 2010ರ ಕಾಮನ್​​ವೆಲ್ತ್​​​ ಗೇಮ್ಸ್, 2011 ಹಾಗೂ 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್​​ಗಳ ಜೊತೆಗೆ ಐಪಿಎಲ್​ಗಳ ನಿರೂಪಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇಂತ ಹೈವೋಲ್ಟೇಜ್ ಟೂರ್ನಿಗಳಲ್ಲಿ ನಿರೂಪಣೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಇದು ಅವರ ಸಾಮರ್ಥ್ಯ ಎಂತದ್ದು ಎಂಬುವುದನ್ನು ತಿಳಿಸುತ್ತೆ. ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಇವರ ಗಂಡನ ಬಗ್ಗೆಯೂ ತಿಳಿದುಕೊಳ್ಳಲೇ ಬೇಕು. ಇವರ ಗಂಡ ಕೂಡ ಓರ್ವ ಕ್ರಿಕೆಟಿಗನೇ ಅದರಲ್ಲೂ ಅವರು ಕನ್ನಡಿಗರು ಎಂಬುದು ವಿಶೇಷ. ಅವರೇ ಸ್ಟುವರ್ಟ್ ಬಿನ್ನಿ.

ಸ್ಟುವರ್ಟ್ ಬಿನ್ನಿ ದೇಸಿ ಕ್ರಿಕೆಟ್​ನಲ್ಲಿ ಮಿಂಚಿದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಮೂಲತಃ ಕರ್ನಾಟದವರಾದ ಇವರು 2008ರ ಐಪಿಎಲ್​​​​ನಲ್ಲಿ ಸಂದರ್ಶನ ಮಾಡುವ ವೇಳೆ ಮೊದಲ ಬಾರಿ ಮಯಾಂತಿ ಭೇಟಿ ಮಾಡಿದ್ದರಂತೆ. ಅಲ್ಲಿಂದ ಇವರಿಬ್ಬರ ಸಂಬಂಧ ಗಾಢವಾಗಿ, ಅದು ಮದುವೆ ವರೆಗು ಬಂತಂತೆ. ಅದೇನೆ ಇದ್ದರು ಸದ್ಯ ಕ್ರೀಡಾ ಲೋಕದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಮಯಾಂತಿ, ಟಿವಿ ಮಾಧ್ಯಮದಲ್ಲಿ ಮಾಡಿರುವ ಸಾಧನೆ ಮಾತ್ರ ಅದ್ಭುತ.

Comments are closed.