ಕ್ರೀಡೆ

ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಉಮೇಶ್ ಯಾದವ್-ರಿಶಬ್ ಪಂತ್’ಗೆ ಸ್ಥಾನ

Pinterest LinkedIn Tumblr

ನವದೆಹಲಿ: ವೆಸ್ಟ್ಇಂಡೀಸ್ ವಿರುದ್ಧದ ಎರಡು ಏಕದಿನ ಪಂದ್ಯಗಳಿಗಾಗಿ ಭಾರತ ತಂಡ ಪ್ರಕಟವಾಗಿದ್ದು ಶಾರ್ದೂಲ್​ ಠಾಕೂರ್ ಬದಲು ವೇಗದ ಬೌಲರ್​ ಉಮೇಶ್​ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ.

ಠಾಕೂರ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಎರಡು ಏಕದಿನ ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ಉಮೇಶ್ ಯಾದವ್ ಗೆ ಸ್ಥಾನ ನೀಡಲು ಆಲ್​ ಇಂಡಿಯಾ ಸೀನಿಯರ್​ ಆಯ್ಕೆ ಸಮಿತಿ ನಿರ್ಧಿರಿಸಿದೆ.

ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೇಗಿ ಉಮೇಶ್ ಯಾದವ್ ಹತ್ತು ವಿಕೆಟ್ ಪಡೆದು ಸರಣಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಕಪಿಲ್ ದೇವ್ ಮತ್ತು ಜಾವಗಲ್ ಶ್ರೀನಾಥ್ ನಂತರದ ಮೂರನೇ ವೇಗದ ಬೌಲರ್ ಯಾದವ್ ಆಗಿದ್ದಾರೆ.

ಇನ್ನು ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಲಿದ್ದು ರಿಶಬ್ ಪಂತ್ ಇದೇ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ಭಾರತ ಮತ್ತು ವೆಸ್ಟ್ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಭಾನುವಾರ, ಅಕ್ಟೋಬರ್ 21 ರಂದು ಗೌಹಾಟಿಯಲ್ಲಿ ನಡೆಯಲಿದೆ.ಎರಡನೇ ಪಂದ್ಯ ಅಕ್ಟೋಬರ್ 24 ರಂದು ವಿಶಾಖಪಟ್ಟಣಂನಲ್ಲಿ ಇರಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ-
ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ​, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ.ಎಸ್​. ಧೋನಿ(ವಿಕೆಟ್​ ಕೀಪರ್​), ಶಿಖರ್​ ಧವನ್​, ಕೆ.ಎಲ್​.ರಾಹುಲ್, ರಿಶಬ್​ ಪಂಟ್​, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್​, ಕುಲದೀಪ್​ ಯಾದವ್​, ಮಹಮ್ಮದ್​ ಶಮಿ, ಖಲೀಲ್​ ಅಹ್ಮದ್​, ಉಮೇಶ್​ ಯಾದವ್​.

Comments are closed.