ಕ್ರೀಡೆ

ವಿಮಾನದಲ್ಲಿ ತನ್ನನ್ನು ಮಾತನಾಡಿಸಲು ಹೆದರಿದ ಅಭಿಮಾನಿಗೆ ಅನಿಲ್ ಕುಂಬ್ಳೆ ಹೇಳಿದ್ದೇನು?

Pinterest LinkedIn Tumblr
Anil Kumble ole

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿ ಇಂದಿಗೆ ಸುಮಾರು 8 ವರ್ಷಗಳೇ ಕಳೆದಿವೆ. ಆದರೆ ಕುಂಬ್ಳೆ ಅವರಿಗಿರುವ ಅಭಿಮಾನಿಗಳು ಮಾತ್ರ ಕಡಿಮೆಯಾಗಿಲ್ಲ. ಅವರನ್ನು ಕಂಡರೆ ಆಟೋಗ್ರಾಫ್​​ಗಾಗಿ, ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕುಂಬ್ಳೆ ಅವರ ಅಪ್ಪಟ ಅಭಿಮಾನಿಯೊಬ್ಬರು ತನ್ನ ಮೆಚ್ಚಿನ ಕ್ರಿಕೆಟಿಗನಿಂದ ಆಟೋಗ್ರಾಫ್ ಪಡೆದ ಸಿಹಿಘಳಿಗೆಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಅಭಿಯಾನಿಯ ಸಂತೋಷದ ಟ್ವೀಟ್​ಗೆ ಸ್ವತಃ ಕುಂಬ್ಳೆ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅನಿಲ್ ಕುಂಬ್ಳೆ ಅವರನ್ನು ಕ್ರಿಕೆಟ್ ಅಭಿಮಾನಿಯೊಬ್ಬರು ತಾವು ಪ್ರಯಾಣಿಸುತ್ತಿದ್ದ ಬೆಂಗಳೂರು-ಮುಂಬೈ ವಿಮಾನದಲ್ಲಿ ನೋಡಿದ್ದಾರೆ. ತನ್ನ ಮೆಚ್ಚಿನ ಕ್ರಿಕೆಟ್ ಪ್ಲೇಯರ್ ಅನ್ನು ಕಂಡು ವಿಮಾನದಿಂದ ಇಳಿದ ತಕ್ಷಣವೇ ಟ್ವೀಟರ್ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ‘ಲೆಜೆಂಡ್ ಅನಿಲ್ ಕುಂಬ್ಳೆ ಅವರು ನಾನು ಪ್ರಯಾಣಿಸುತ್ತಿದ್ದ ಬೆಂಗಳೂರು-ಮುಂಬೈ ವಿಮಾನದಲ್ಲಿದ್ದರು,’ ಎಂದು ಬರೆದುಕೊಂಡು ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

Comments are closed.