ಕ್ರೀಡೆ

ಮೈದಾನದಲ್ಲೇ ಸಿಟ್ಟಾದ ಧೋನಿ, ಬೆದರಿದ ಕುಲದೀಪ್

Pinterest LinkedIn Tumblr


ದುಬೈ: ಎರಡು ವರ್ಷಗಳ ಬಳಿಕ ಟೀಂ ಇಂಡಿಯಾದ ನಾಯಕನಾಗಿ ಮೈದಾನಕ್ಕಿಳಿದಿದ್ದ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿಯೇ ತಮ್ಮ ನಾಯಕತ್ವದ ಗತ್ತನ್ನು ಪ್ರದರ್ಶಿಸಿದ್ದಾರೆ.
ಸದಾ ಕೂಲ್ ಆಗಿರುವ ಧೋನಿ, ಆಟದ ವಿಷಯಕ್ಕೆ ಬಂದರೆ ತುಂಬಾ ವೈಲಂಟ್ ಆಗಿಬಿಡುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತೆ ಎಂಎಸ್ ಧೋನಿ ಮೈದಾನದಲ್ಲೇ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ವಿರುದ್ಧ ಸಿಟ್ಟಾಗಿದ್ದರು.
ಎಂಎಸ್ ಧೋನಿ ವಿಕೆಟ್ ಹಿಂದೆ ನಿಂತು ಬೌಲರ್ಸ್ ಹಾಗೂ ಫೀಲ್ಡರ್ಸ್ ಜೊತೆಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುತ್ತಾರೆ. ನಿನ್ನೆಯ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಗೆ ವಾರ್ನಿಂಗ್ ಮಾಡಿರುವುದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ.
ಕುಲದೀಪ್ ಯಾದವ್ ಬೌಲಿಂಗ್ ಮಾಡುವ ವೇಳೆ ತಮಗೆ ಬೇಕಾದ ರೀತಿಯಲ್ಲಿ ಫೀಲ್ಡರ್ಸ್ ನಿಯೋಜಿಸಲು ಪ್ರಯತ್ನಿಸಿ ಬೌಲಿಂಗ್ ಮಾಡಲು ತಡ ಮಾಡುತ್ತಿದ್ದರು. ಇದು ಧೋನಿ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಕೂಡಲೇ ಧೋನಿ ಕುಲದೀಪ್ ಗೆ ‘ಬೌಲಿಂಗ್ ಮಾಡ್ತೀಯಾ ಇಲ್ಲಾಂದ್ರೆ ಬೌಲರ್ ಚೇಂಜ್ ಮಾಡ್ಲಾ’ ಎಂದು ಹೇಳಿದ್ದಾರೆ.
ಇನ್ನು ಧೋನಿ ಈ ಹಿಂದೆ ಸಹ ಕುಲದೀಪ್ ಯಾದವ್ ಗೆ ವಾರ್ನಿಂಗ್ ಮಾಡಿದ್ದ ವಿಚಾರ ಸಖತ್ ಚರ್ಚೆಗೆ ಗ್ರಾಸವಾಗಿತ್ತು.

Comments are closed.