ಕ್ರೀಡೆ

ಏಷ್ಯಾಕಪ್: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ ಭರ್ಜರಿ ಜಯ ಸಾಧಿಸಿದ ಭಾರತ

Pinterest LinkedIn Tumblr

ದುಬೈ: ಏಷ್ಯಾ ಕಪ್ 2018 ಪಂದ್ಯಾವಳಿ ಸೂಪರ್ ಫೋರ್‌ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಬಾಂಗ್ಲಾದೇಶ ಒಡ್ಡಿದ 174 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 36.2ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವುದರೊಂದಿಗೆ ಗೆಲುವಿನ ಮಾಲೆ ಧರಿಸಿದೆ.

ಆರಂಭಿಕ ಆಟಗಾರರಾದ ಶಿಖರ್‌ ಧವನ್‌ 1 ಸಿಕ್ಸರ್, 4 ಬೌಂಡರಿ ನೆರವಿನೊಂದಿಗೆ 40 ರನ್ ಗಳಿಸಿದ್ದರೆ ನಂತರ ಬಂದ ನಾಯಕ ರೋಹಿತ್‌ ಶರ್ಮಾ ರನ್ ಸುರಿಮಳೆಯನ್ನೇ ಸುರಿಸಿದ್ದಾರೆ.

5 ಬೌಂಡರಿ, 3 ಸಿಕ್ಸರ್ ಗಳೊಡನೆ ರೋಹಿತ್ 83 ರನ್ ಗಳಿಸಿ ಅಜೇಯರಾಗಿ ಉಳಿದರು.

ಇನ್ನು ಅಂಬಟಿ ರಾಯಡು 13 ರನ್ ಬಾರಿಸಿ ಪೆವಿಲಿಯನ್ ಗೆ ತೆರಳಿದರೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಸಹ ಬೌಲರ್ ಗಳ ದಿಕ್ಕುಗೆಡಿಸಿದ್ದರು.33ರನ್ ಪೇರಿಸಿದ ಧೋನಿ ಬ್ಯಾಟ್ ನಿಂದ 3 ಬೌಂಡರಿಗಳು ಸಿಡಿದಿದ್ದವು.

ಬಾಂಗ್ಲಾ​ ಪರ ಯಾವೊಬ್ಬ ಬೌಲರ್​ ಕೂಡ ಉತ್ತಮ ಪ್ರದರ್ಶನ ತೋರಿಸಲಿಲ್ಲವಾದರೂ ಶಕಿಬ್​ ಅಲ್​ ಹಸನ್​, ರುಬೆಲ್​ ಹೊಸೈನ್​ ಹಾಗೂ ಮುಶ್ರಫೆ ಮೊರ್ತಜಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 173 (49.1)
ಭಾರತ: 174/3 (36.2)

Comments are closed.