ಕ್ರೀಡೆ

ತನ್ನ ತಪ್ಪಿನಿಂದ ಔಟಾಗಿ ಅದಕ್ಕೆ ಪಾರಿವಾಳವನ್ನು ಹೊಣೆ ಮಾಡುವುದು ಸರಿನಾ?

Pinterest LinkedIn Tumblr

ಬರ್ಮಿಂಗ್ ಹ್ಯಾಮ್: ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಬ್ಯಾಟ್ಸ್ ಮನ್ ಕೀಟನ್ ಜೆನ್ನಿಂಗ್ಸ್ ಔಟಾಗಿ ಪೆವಿಲಿಯನ್ ಸೇರಿದರು. ಇನ್ನು ಜೆನ್ನಿಂಗ್ಸ್ ಔಟ್ ಆಗಲು ಪಾರಿವಾಳ ಕಾರಣವಂತೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ತಂಡದ ಆರಂಭಿಕ ಕುಸಿತದ ನಡುವೆ ಕೀಟನ್ ಜೆನ್ನಿಂಗ್ಸ್ ಹಾಗೂ ಜೋ ರೂಟ್ ಉತ್ತಮ ಜತೆಯಾಟ ನೀಡಿದ್ದರು.

42 ರನ್ ಗಳಿಸಿದ್ದ ಕೀಟನ್ ಜೆನ್ನಿಂಗ್ಸ್ ಮೊಹಮ್ಮದ್ ಶಮಿ ಅವರ ಬೌಲಿಂಗ್ ನಲ್ಲಿ ಬೋಲ್ಡ್ ಆಗಿ ಪೆವಿಲಿಯನ್ ಸೇರಿದ್ದರು. ಆದರೆ ಜೆನ್ನಿಂಗ್ಸ್ ವಿಕೆಟ್ ಬೀಳಲು ಪಾರಿವಾಳ ಕಾರಣ ಎಂದು ಹೇಳಲಾಗುತ್ತಿದೆ.

ಜೆನ್ನಿಂಗ್ಸ್ ಬ್ಯಾಟ್ ಮಾಡುತ್ತಿದ್ದ ವೇಳೆ ಮೈದಾನದಲ್ಲಿ ಪಾರಿವಾಳವೊಂದು ಕುಳಿತ್ತಿತ್ತು. ಅದನ್ನು ಓಡಿಸಲು ಖುದ್ದು ಜೆನ್ನಿಂಗ್ಸ್ ಮುಂದಾದರೂ ಅದು ಮೈದಾನ ಬಿಟ್ಟು ಹೋಗಿಲ್ಲ. ಇದರಿಂದ ಬೌಲಿಂಗ್ ಮೇಲಿನ ಗಮನ ಕಳೆದುಕೊಂಡು ಬೋಲ್ಡ್ ಆಗಿದ್ದಾರೆ.

ಮೊದಲ ದಿನದಾಟದ ಬಳಿಕ ಖುದ್ದು ಕೀಟನ್ ಜೆನ್ನಿಂಗ್ಸ್ ತಾವು ಬೌಲಿಂಗ್ ಮೇಲೆ ಗಮನ ಕಳೆದುಕೊಂಡಿದ್ದೇ ಎಂದು ಹೇಳಿಕೊಂಡಿದ್ದಾರೆ.

Comments are closed.