ಅಂತರಾಷ್ಟ್ರೀಯ

2 ವರ್ಷದ ಪೋರನ ಬ್ಯಾಟಿಂಗ್ ಶೈಲಿಗೆ ಐಸಿಸಿ ಫಿದಾ

Pinterest LinkedIn Tumblr


ದುಬೈ: 2 ವರ್ಷದ ಬಾಂಗ್ಲಾದೇಶದ ಪೋರನ ಬ್ಯಾಟಿಂಗ್ ಶೈಲಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಫಿದಾ ಆಗಿದ್ದು, ವಾರದ ಐಸಿಸಿ ಫ್ಯಾನ್ ಆಗಿ ಆಯ್ಕೆ ಮಾಡಿದೆ.

ಬಾಲಕನ ಬ್ಯಾಟಿಂಗ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವ ಐಸಿಸಿ, ಈತನಿಗೆ ಕೇವಲ ಎರಡು ವರ್ಷ. ಆದರೆ ಆತನ ಆಫ್ ಸೈಡ್ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾಗಿದೆ ಎಂದು ಬರೆದುಕೊಂಡಿದೆ.

ಈ ವಿಡಿಯೋದಲ್ಲಿರುವ ಬಾಲಕನ ಹೆಸರು ಅಲಿ. ಬಾಂಗ್ಲಾದೇಶದ ನಿವಾಸಿಯಾಗಿದ್ದು, ತಂದೆಯೊಂದಿಗೆ ಸೇರಿ ಬ್ಯಾಟಿಂಗ್ ತರಬೇತಿ ಪಡೆಯುತ್ತಿರುವ ವೇಳೆ ವಿಡಿಯೋ ಮಾಡಲಾಗಿದೆ. ತಂದೆ ಒಂದರ ಹಿಂದೆ ಒಂದರಂತೆ ಬಾಲ್ ಎಸೆಯುತ್ತಿದ್ದರೆ ಅಲಿ ತನ್ನದೇ ಶೈಲಿಯಲ್ಲಿ ಬ್ಯಾಟ್ ಮಾಡಿದ್ದಾನೆ. ಕೊನೆಯ ನಾಲ್ಕು ಎಸೆತಗಳನ್ನು ಸಿಕ್ಸರ್ ಸಿಡಿಸಲು ಕೂಡ ಯತ್ನಿಸಿ ಯಶಸ್ವಿಯಾಗಿದ್ದಾನೆ.

ಅಂದಹಾಗೇ ಐಸಿಸಿ ಸಂಸ್ಥೆ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಅವಕಾಶವೊಂದನ್ನು ನೀಡಿದ್ದು, ಅಭಿಮಾನಿಗಳು ಕ್ರಿಕೆಟ್ ಆಡಿರುವ ವಿಡಿಯೋಗಳನ್ನು ಕಳುಹಿಸಲು ಹೇಳಿದೆ. ಇದರಲ್ಲಿ ಅತ್ಯುತ್ತಮ ವಿಡಿಯೋಗಳನ್ನು ಆಯ್ಕೆ ಮಾಡಿ ಐಸಿಸಿ ಫ್ಯಾನ್ ಆಫ್ ದಿ ವಿಕ್ ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತದೆ. ನೀವು ಸಹ ನಿಮ್ಮ ವಿಡಿಯೋಗಳನ್ನು ಕಳುಹಿಸಬಹುದಾಗಿದೆ.

Comments are closed.