ಕ್ರೀಡೆ

ಮಂಡೇಲಾ 100ನೇ ಜನ್ಮದಿನದ ವೇಳೆ ಹಳೆಯ ನೆನಪನ್ನು ಸ್ಮರಿಸಿಕೊಂಡ ಸಚಿನ್

Pinterest LinkedIn Tumblr

ಮುಂಬೈ: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ, ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾದ ನೆಲ್ಸನ್ ಮಂಡೇಲಾ ಅವರ 100 ನೇ ಹುಟ್ಟುಹಬ್ಬವನ್ನು ಬುಧವಾರ (ಜುಲೈ 18) ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಈ ಸಂದರ್ಭ ಟೀಂ ಇಂಡಿಯಾದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂದೂಲ್ಕರ್ ತಾವು ಮಂಡೇಲಾ ಅವರನ್ನು ಭೇತಿಯಾಗಿದ್ದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.

“ಮಂಡೇಲಾ ಅವರ 100 ನೇ ಹುಟ್ಟುಹಬ್ಬದಂದು ಅವರನ್ನು ಸ್ಮರಿಸುತ್ತೇನೆ.ನನ್ನ ಜೀವನದ ಆರಂಭದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಈ ಅವಕಾಶ ಪಡೆದ ನಾನು ಬಹಳ ಅದೃಷ್ಟಶಾಲಿಯಾಗಿದ್ದೆ. ಅವರಿಂದ ಸ್ಪೂರ್ತಿ ಹೊಂದಲು, ಕಲಿಯಲು ಸಾಕಷ್ಟು ಇದೆ” ಎಂದು ಸಚಿನ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಬ್ರಿಟೀಷರು ಜಾರಿಗೆ ತಂದಿದ್ದ ವರ್ಣಭೇದ ನೀತಿ ವಿರೋಧಿಸಿ ಹೋರಾಡಿದ್ದಲ್ಲದೆ 27 ವರ್ಷಗಳ ಸುದೀರ್ಘ ಸೆರೆವಾಸ ಅನುಭವಿಸಿದ್ದ ಮಂಡೇಲಾ ಡಿಸೆಂಬರ್ 13, 2013 ರಂದು ತಮ್ಮ 95 ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದರು.

Comments are closed.