ಕ್ರೀಡೆ

ಧೋನಿಯಿಂದ ವಿಕೆಟ್ ಕೀಪಿಂಗ್’ನಲ್ಲಿ ಎರಡು ಅಪರೂಪದ ದಾಖಲೆ!

Pinterest LinkedIn Tumblr


ಬ್ರಿಸ್ಟಾಲ್: ಇಂಗ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 500 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಮೂರನೇ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ಇಂದು ನಡೆಯುತ್ತಿರುವ ಆಂಗ್ಲರ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಧೋನಿ ಮತ್ತೆರಡು ದಾಖಲೆ ನಿರ್ಮಿಸಿದ್ದಾರೆ.

ಹೌದು, 37 ವರ್ಷದ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ 501ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಎರಡು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 50 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಧೋನಿ ನಿರ್ಮಿಸಿದ್ದಾರೆ.

ಇನ್ನು ಒಂದೇ ಪಂದ್ಯದಲ್ಲಿ 5 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನೂ ಧೋನಿ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆ್ಯಡಂ ಗಿಲ್’ಕ್ರಿಸ್ಟ್ ಜಿಂಬಾಬ್ವೆ ವಿರುದ್ಧ 4 ಕ್ಯಾಚ್ ಪಡೆದಿದ್ದರು.

Comments are closed.