ರಾಷ್ಟ್ರೀಯ

ಚಿದಂಬರಂ ಮನೆಯಿಂದ ಕೋಟ್ಯಂತರ ಮೌಲ್ಯದ ಒಡವೆ ಕಳ್ಳತನ

Pinterest LinkedIn Tumblr


ಚೆನ್ನೈ: ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನಿವಾಸದಿಂದ ಕೋಟ್ಯಂತರ ರೂ. ಮೌಲ್ಯದ ಆ್ಯಂಟಿಕ್( ಹಳೆಯಕಾಲದ ಬೆಲೆಬಾಳುವ ) ಒಡವೆಗಳು, ಒಂದೂವರೆ ಲಕ್ಷ ರೂ. ನಗದು ಹಾಗೂ 6 ರೇಷ್ಮೆ ಸೀರೆಗಳು ಕಳುವಾಗಿವೆ.

ತಮಿಳುನಾಡು ರಾಜಧಾನಿ ಚೆನ್ನೈನ ನುಂಗಂಬಾಕಮ್ ಪ್ರದೇಶದಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ಊಟಿಗೆ ಹೋಗಿದ್ದ ಸಂಸದರ ಪತ್ನಿ ನಳಿನಿ ಚಿದಂಬರಂ ಇಂದು ಬೆಳಗ್ಗೆ ಮನೆಗೆ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ, ಘಟನೆಯ ಹಿಂದೆ ಮನೆಯ ಇಬ್ಬರು ಕೆಲಸಗಾರರ ಕೈವಾಡವಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಚಿದಂಬರಂ ಪತ್ನಿಯ ಮ್ಯಾನೇಜರ್ ಮುರಳಿ ಥೌಸೆಂಡ್ ಲೈಟ್ಸ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ನಿವಾಸದ ಸಿಸಿಟಿವಿ ವಿಡಿಯೋವನ್ನು ದಾಖಲಿಸಿಕೊಂಡಿದ್ದು, ಈ ವೇಳೆ ಇಬ್ಬರು ಮಹಿಳೆಯರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಮನೆಯೊಳಗೆ ಹೋಗುತ್ತಿರುವುದು ಸೆರೆಯಾಗಿದೆ. ಇವರಿಬ್ಬರನ್ನು ಮನೆಯ ಕೆಲಸಗಾರರು ಎನ್ನಲಾಗಿದೆ. ಈ ನಡುವೆ, ಇಬ್ಬರು ಮಹಿಳಾ ಸೇವಕರು ನಾಪತ್ತೆಯಾಗಿರುವುದರಿಂದ ಇವರಿಬ್ಬರ ಮೇಲೆ ಅನುಮಾನ ಮತ್ತಷ್ಟು ಹೆಚ್ಚಾಗಿದ್ದು, ಪೊಲೀಸರು ಇವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Comments are closed.