ಕ್ರೀಡೆ

ಅಪ್ಪನ ಹಾದಿಯಲ್ಲಿಯೇ ಸಾಗುತ್ತಿರುವ ಜೂನಿಯರ್ ರೊನಾಲ್ಡೋ ! ಮಗನ ಚಾಕಚಕ್ಯತೆ ನೋಡಿ ಖುಷಿಯಾದ ಸೀನಿಯರ್ ರೊನಾಲ್ಡೋ

Pinterest LinkedIn Tumblr

ಮಾಸ್ಕೋ: ಸಾಮಾನ್ಯವಾಗಿ ಖ್ಯಾತನಾಮ ಕ್ರೀಡಾಪಟುಗಳಿಗೆ ದೊರೆತ ಕೀರ್ತಿ ಅವರ ಮಕ್ಕಳಿಗೆ ಸಿಗುವುದಿಲ್ಲ. ಇದಕ್ಕೆ ಸಾಕಷ್ಟು ಖ್ಯಾತನಾಮ ಕ್ರೀಡಾಪಟುಗಳು ಮತ್ತು ಅವರ ಮಕ್ಕಳು ಉದಾಹರಣೆಯಂತಿದೆ.

https://www.facebook.com/nGoloscom/videos/436648130129980/?t=101

ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮಗ ಮಾತ್ರ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾನೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ರೊನಾಲ್ಡೋ ಪುತ್ರ ಕ್ರಿಸ್ಟಿಯಾನೋ ರೊನಾಲ್ಡೋ ಸ್ಯಾಂಟೋಸ್ ಕೂಡ ಭಾಗಿಯಾಗಿದ್ದ. ಪೋರ್ಚುಗಲ್ ತಂಡದ ಪಂದ್ಯಕ್ಕೂ ಮುನ್ನ ತಮ್ಮ ತಂದೆ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ತಾನೂ ಕೂಡ ಮೈದಾನಕ್ಕೆ ಇಳಿದ ಜೂನಿಯರ್ ರೊನಾಲ್ಡೋ ಇತರೆ ಪುಟ್ಟಮಕ್ಕಳೊಂದಿಗೆ ಆಟವಾಡಿದ್ದಾನೆ.

ಈ ವೇಳೆ ಮಗನ ಚಾಕಚಕ್ಯತೆ, ಟೈಮಿಂಗ್ ಮತ್ತು ಫುಟ್ ವರ್ಕ್ ಕಂಡ ರೊನಾಲ್ಡೋ ಖುಷಿಯಾಗಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಪ್ಪನ ಹಾದಿಯಲ್ಲೇ ಸಾಗುತ್ತಿರುವ ಜೂನಿಯರ್ ರೊನಾಲ್ಡೋಗೂ ಅದೇ ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Comments are closed.