ಕ್ರೀಡೆ

ರಾತ್ರಿ ತನ್ನನ್ನು ಕಾಣಲು ಬಂದ ಇರಾನ್ ಅಭಿಮಾನಿಗಳಿಗೆ ರೊನಾಲ್ಡೋ ಮಾಡಿದ್ದೇನು ಗೊತ್ತಾ?

Pinterest LinkedIn Tumblr

ಮಾಸ್ಕೋ: ಇರಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಇರಾನ್ ಅಭಿಮಾನಿಗಳ ನಡುವಿನ ಹಾಸ್ಯಮಯ ಮಾತುಕತೆ ಇದೀಗ ವ್ಯಾಪಕ ವೈರಲ್ ಅಗುತ್ತಿದೆ.

ಹೌದು.. ಸೋಮವಾರದ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡ ವಿಶ್ರಾಂತಿ ಪಡೆಯುತ್ತಿದ್ದ ಹೊಟೆಲ್ ಸಮೀಪ ಆಗಮಿಸಿದ್ದ ನೂರಾರು ಇರಾನ್ ಅಭಿಮಾನಿಗಳು ಜೋರಾಗಿ ಘೋಷಣೆ ಕೂಗುತ್ತಿದ್ದರು. ಬೆಳಗ್ಗೆ ಪಂದ್ಯವಿದ್ದದರಿಂದ ಪೋರ್ಚುಗಲ್ ತಂಡದ ಆಟಗಾರರ ನಿದ್ರೆ ಹಾಳು ಮಾಡಿ ಪಂದ್ಯ ಸೋಲುವಂತೆ ಮಾಡುವುದು ಅಭಿಮಾನಿಗಳ ಇರಾದೆಯಾಗಿತ್ತೋ ಏನೋ. ಅದೇ ಕಾರಣಕ್ಕೆ ಪೋರ್ಚುಗಲ್ ತಂಡದ ಆಟಗಾರರು ತಂಗಿದ್ದ ಹೊಟೆಲ್ ಬಳಿ ಆಗಮಿಸಿದ್ದ ಅಭಿಮಾನಿಗಳು ಜೋರಾಗಿ ಕೂಗಾಡಿದ್ದಾರೆ.

ಕೆಲಹೊತ್ತು ಹೊಟೆಲ್ ನ ಭದ್ರತಾ ಸಿಬ್ಬಂದಿ ಅವರನ್ನು ದೂರ ಕಳುಹಿಸುವ ಪ್ರಯತ್ನ ಮಾಡಿದರಾದರೂ ಮತ್ತೆ ಆಗಮಿಸಿದ ಅಭಿಮಾನಿಗಳು ಮತ್ತೆ ಜೋರಾಗಿ ಕೂಗಲು ಆರಂಭಿಸಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಪೋರ್ಚುಗಲ್ ಆಟಗಾರರು ತಮ್ಮ ತಮ್ಮ ಕೋಣೆಯಲ್ಲಿ ಮಲಗಿದ್ದಾರೆ. ಆದರೆ ಆ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮಾತ್ರ ಕಿಟಕಿ ಬಳಿ ಬಂದು ಅಭಿಮಾನಿಗಳಿಗೆ ಸನ್ನೆ ಮಾಡುತ್ತಾ, ಕಿರುಚಾಡಬೇಡಿ.. ಮಲಗಬೇಕು ಎಂದು ಹೇಳಿದ್ದಾರೆ. ಈ ಹಾಸ್ಯಾತ್ಮಕ ದೃಶ್ಯಗಳನ್ನು ಕೆಲ ಅಭಿಮಾನಿಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

Comments are closed.