ಕ್ರೀಡೆ

ವಿರಾಟ್ ಕೊಹ್ಲಿ- ಪಾಂಡ್ಯಾ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು..?

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟದ ಕೆಲಸ ಎಂದು ಭಾರತ ಕ್ರಿಕೆಟ್ ತಂಡ ಬ್ಯಾಟ್ಸಮನ್ ಕೆಎಲ್ ರಾಹುಲ್ ಹೇಳಿದ್ದಾರೆ.

ಖಾಸಗಿ ವಾಹಿನಿಯ ಟಾಕ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಟೀಂ ಇಂಡಿಯಾ ಮತ್ತು ತನ್ನ ಕ್ರಿಕೆಟ್ ಜೀವನ ಕೆಲ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದರು. ಪ್ರಮುಖವಾಗಿ ತಂಡದ ನಾಯಕ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ರಾಹುಲ್, ಕೊಹ್ಲಿ ತುಂಬಾ ಅಗ್ರೆಸ್ಸಿವ್ ಆಟಗಾರ. ಆತನ ಆಕ್ರಮಣಕಾರಿ ಮನೋಭಾವ ಎದುರಾಳಿ ಆಟಗಾರರಷ್ಟೇ ಅಲ್ಲ ಕೆಲವೊಮ್ಮೆ ನಮಗೂ ಆತಂಕ ತಂದೊಡ್ಡುತ್ತದೆ. ಕೊಹ್ಲಿಯೊಂದಿಗೆ ಬ್ಯಾಟಿಂಗ್ ಮಾಡುವುದು ಕಷ್ಟದ ಕೆಲಸ ಎಂದು ಹೇಳಿದ್ದಾರೆ.

ಕೊಹ್ಲಿ ಸಾಮಾನ್ಯವಾಗಿ ಎದುರಾಳಿ ಆಟಗಾರರನ್ನು ತುಂಬಾ ಕೆಣಕುತ್ತಾರೆ. ನಾನು ಬ್ಯಾಟಿಂಗ್ ಮಾಡುವಾಗ ಬೌಂಡರಿ ಬಂದರೆ ಬೇಕೆಂದೇ ಎದುರಾಳಿ ಬೌಲರ್ ಗೆ ಕೇಳುವಂತೆ ಕೊಹ್ಲಿ ಅದ್ಬುತವಾದ ಶಾಟ್ ಹೊಡೆದೆ. ಅದನ್ನು ಹಾಗೆಯೇ ಮುಂದುವರೆಸು.. ಕಮಾನ್ ಎಂದು ಕೂಗುತ್ತಾರೆ. ವಿಚಾರ ಏನು ಎಂದರೆ ಆ ಶಾಟ್ ಅನ್ನು ನಾನು ಆಕಸ್ಮಿಕವಾಗಿ ಹೊಡೆದಿರುತ್ತೇನೆ. ಆದರೆ ಕೊಹ್ಲಿ ಮಾತು ಕೇಳಿ ಎದುರಾಳಿ ಬೌಲರ್ ನಾನು ಬ್ಯಾಟಿಂಗ್ ಮಾಡುವಾಗ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಾನೆ. ಕೊಹ್ಲಿ ಅಗ್ರೆಸಿವ್ ನೆಸ್ ನೋಡಿದರೆ ನಮಗೆ ಕಷ್ಟವಾಗುತ್ತದೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ಪಾಂಡ್ಯಾ ಜೊತೆ ಔಟಿಂಗ್ ಹೋಗಲು ಭಯವಾಗುತ್ತದೆ
ಇದೇ ವೇಳೆ ಟೀಂ ಇಂಡಿಯಾದ ಮತ್ತೋರ್ವ ಆಟಗಾರ ಹಾರ್ದಿಕ್ ಪಾಂಡ್ಯಾ ಕುರಿತು ಮಾತನಾಡಿರುವ ರಾಹುಲ್, ಪಾಂಡ್ಯಾ ಜೊತೆ ಔಟಿಂಗ್ ಹೋಗಲು ಭಯವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಎಲ್ಲವನ್ನೂ ಓಪನ್ ಹೇಳಿ ಬಿಡುತ್ತಾನೆ. ಆತನ ನಾಲಿಗೆಗೆ ಫಿಲ್ಟರ್ ಎಂಬುದೇ ಇಲ್ಲ. ಯಾವ ವಿಚಾರವನ್ನು ಯಾರ ಬಳಿ ಹೇಗೆ ಹೇಳಬೇಕು ಎಂಬುದು ಆತನಿಗೆ ತಿಳಿದಿಲ್ಲ. ಈ ಹಿಂದೆ ಆತನೊಂದಿಗೆ ನಾವು ಔಟಿಂಗ್ ಗೆ ಹೋಗಿದ್ದ ವಿಚಾರವನ್ನು ಕೊಹ್ಲಿಗೆ ಹೇಳಿ ಬಿಟ್ಟಿದ್ದ. ಬಳಿಕ ಈ ವಿಚಾರವಾಗಿ ಸಮಸ್ಯೆಯಾಗಿತ್ತು. ನಿಜ ಹೇಳಬೇಕು ಎಂದರೆ ನಾನು ನನ್ನ ಜೀವನದಲ್ಲೇ ಪಾಂಡ್ಯಾರಂತಹ ವ್ಯಕ್ತಿಯನ್ನು ನೋಡಿಯೇ ಇಲ್ಲ ಎಂದು ರಾಹುಲ್ ಹೇಳಿದ್ದಾರೆ.

Comments are closed.