ಕ್ರೀಡೆ

ಟೀಮ್ ಇಂಡಿಯಾ ಆಯ್ಕೆಗೂ ಮೊದಲೇ ಯೊ-ಯೊ ಫಿಟ್ನೆಸ್ ಪರೀಕ್ಷೆ!

Pinterest LinkedIn Tumblr


ಹೊಸದಿಲ್ಲಿ: ಆಟಗಾರರು ಕಡ್ಡಾಯ ದೈಹಿಕ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಟೀಮ್ ಇಂಡಿಯಾ ಆಯ್ಕೆಗೂ ಮೊದಲೇ ಯೊ-ಯೊ ಫಿಟ್ನೆಸ್ ಪರೀಕ್ಷೆಯನ್ನು ಹಮ್ಮಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಇದೀಗಷ್ಟೇ ಮೊಹಮ್ಮದ್ ಶಮಿ ಹಾಗೂ ಅಂಬಟಿ ರಾಯುಡು ತಂಡಕ್ಕೆ ಆಯ್ಕೆಯಾಗಿದ್ದರೂ ಯೊ-ಯೊ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದ ಹಿನ್ನಲೆಯಲ್ಲಿ ಕೈಬಿಡಲಾಗಿತ್ತು.

ಶಮಿ ಅಫಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರೆ ರಾಯುಡು ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಬಳಿಕ ಇವರಿಬ್ಬರ ಸ್ಥಾನಗಳನ್ನು ನವ್‌ದೀಪ್ ಸೈನಿ ಹಾಗೂ ಸುರೇಶ್ ರೈನಾ ತುಂಬಿಕೊಂಡಿದ್ದರು.

ಇನ್ನೊಂದೆಡೆ ಇದೇ ಕಾರಣದಿಂದ ಭಾರತ ಎ ತಂಡದ ಇಂಗ್ಲೆಂಡ್ ಸರಣಿಯಿಂದಲೂ ಸಂಜು ಸ್ಯಾಮ್ಸನ್ ಅವಕಾಶ ವಂಚಿತರಾಗಿದ್ದರು.

ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಪ್ರತಿಯೊಬ್ಬ ಆಟಗಾರನಿಗೂ ಯೊ-ಯೊ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲಿ ತೇರ್ಗಡೆ ಹೊಂದಿದರೆ ಮಾತ್ರ ಇನ್ನು ಮುಂದೆ ಆಯ್ಕೆಗೆ ಪರಿಗಣಿಸಲಾಗುವುದು.

ಬಿಸಿಸಿಐ ಆಡಳಿತಗಾರರ ಸಮಿತಿ (ಸಿಒಎ) ನಡೆಸಿರುವ ಸಭೆಯಲ್ಲಿ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಸ್ಥ ವಿನೋದ್ ರಾಯ್, ಡಯಾನಾ ಎದುಲ್ಜಿ, ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಸಬಾ ಕರೀಮ್ ಉಪಸ್ಥಿತರಿದ್ದರು.

Comments are closed.